Select Your Language

Notifications

webdunia
webdunia
webdunia
webdunia

ದರ್ಶನ್‌ ಕೇಸ್‌ನಲ್ಲಿ ಹೀರೋ ಆಗಿದ್ದ ಎಸಿಪಿ ಚಂದನ್ ಕುಮಾರ್ ವಿರುದ್ಧ ಪೊಲೀಸ್‌ ಆಯುಕ್ತರಿಗೆ ದೂರು

ದರ್ಶನ್‌ ಕೇಸ್‌ನಲ್ಲಿ ಹೀರೋ ಆಗಿದ್ದ ಎಸಿಪಿ ಚಂದನ್ ಕುಮಾರ್ ವಿರುದ್ಧ ಪೊಲೀಸ್‌ ಆಯುಕ್ತರಿಗೆ ದೂರು

Sampriya

ಬೆಂಗಳೂರು , ಬುಧವಾರ, 31 ಜುಲೈ 2024 (16:04 IST)
ಬೆಂಗಳೂರು: ನಾಯಿ ಮಾಂಸ ಮಾರಾಟ ಆರೋಪ ಮಾಡಿದ್ದ ಹಿಂದೂ ಸಂಘಟನೆ ಮುಖಂಡ ಪುನೀತ್ ಕೆರೆಹಳ್ಳಿ ಮೇಲೆ ಎಸಿಪಿ ಚಂದನ್ ಕುಮಾರ್ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಮಾಜಿ ಸಂಸದ ಪ್ರತಾಪ್ ಸಿಂಹ, ಶಾಸಕ ಹರೀಶ್ ಪೂಂಜಾ ಅವರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.

ಇನ್ನೂ ಪುನೀತ್ ಕೆರೆಹಳ್ಳಿ ಅವರು ಈ ಪ್ರಕರಣ ಸಂಬಂಧ ಮಾತನಾಡಿ, ನನ್ನ ಬಳಿ ಕಲೆಬೆರೆಕೆ ಮಾಂಸ ಮಾರಾಟದ ಬಗ್ಗೆ ದಾಖಲೆ ಇದೆ ಎಂದು ಹೇಳುತ್ತಿರುವಾಗ ನನ್ನನ್ನ ವಶಕ್ಕೆ ಪಡೆದು ಕಾಟನ್ ಪೇಟೆ ಪೊಲೀಸ್‌ ಠಾಣೆಗೆ ಕರೆದುಕೊಂಡು ಹೋದರು.  ನನ್ನ ಕಾಲಿಗೆ ಪೆಟ್ಟಾಗಿದ್ದು, ನಡೆಯಕ್ಕೆ ಆಗ್ತಿಲ್ಲ ಅಂದ್ರು, ನನ್ನನ್ನು ಎಳೆದುಕೊಂಡು ಹೋಗಿ ಪೊಲೀಸ್ ಠಾಣೆಯ ಕೋಣೆಯೊಳಗೆ ಹಾಕಿದ್ರು. ನನಗೆ ನಿಲ್ಲಕ್ಕೆ ಆಗುತ್ತಿಲ್ಲ ಎಂದಾಗ ಅವಾಚ್ಯ ಶಬ್ಧಗಳಿಂದ ನಿಂದಿಸಿದರು.

ಈ ವೇಳೆ ಅಲ್ಲಿಗೆ ಬಂದ ಎಸಿಪಿ ಚಂದನ್ ಕುಮಾರ್ ಅವರು , ಯಾಕೆ ಅವನನ್ನು ಮಲಗಿಸಿದ್ದು ಎಬ್ಬಿಸಿ ಎಂದು ಅವಾಚ್ಯ ಪದ ಬಳಸಿದ್ದಾರೆ. ಎದ್ದೇಳಲು ಆಗುತ್ತಿಲ್ಲ ಎಂದಾಗ ಎಸಿಪಿ ಅವರು, ನನಗೆ ಆತನನ್ನು ಹೇಗೆ ಎಬ್ಬಿಸಬೇಕೆಂಬುದು ಗೊತ್ತು ಎಂದು ಲಾಠಿಯಲ್ಲಿ ಎಂಟು ಏಟು ಹೊಡೆದರು. ನನ್ನ ಜುಟ್ಟು ಮತ್ತು ಗಡ್ಡವನ್ನು ಹಿಡಿದು ನಿಲ್ಲಿಸಿ ನನ್ನ ಬಟ್ಟೆಯನ್ನು ತೆಗೆಸಿ ಸಂಪೂರ್ಣ ನಗ್ನ ಗೊಳಿಸಿದ್ದಾರೆ. ಮೂವತ್ತು ನಿಮಿಷಗಳ ಕಾಲ ನನ್ನನ್ನು ನಗ್ನವಾಗಿ ನಿಲ್ಲಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಇದೀಗ ಈ ಸಂಬಂದ ಮಾಜಿ ಸಂಸದ ಪ್ರತಾಪ್ ಸಿಂಹ, ಪುನೀತ್ ಕೆರೆಹಳ್ಳಿ ಹಾಗೂ ಶಾಸಕ ಹರೀಶ್ ಪೂಂಜಾ ಅವರು ಹೆಚ್ಚುವರಿ ಪೊಲೀಸ್ ಆಯುಕ್ತ ಸತೀಶ್ ಕುಮಾರ್ ಅವರ ಬಳಿ ದೂರು ನೀಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಯುಪಿಎಸ್‌ಸಿ ನೂತನ ಅಧ್ಯಕ್ಷರಾಗಿ ಪ್ರೀತಿ ಸುದನ್ ಆಯ್ಕೆ