Select Your Language

Notifications

webdunia
webdunia
webdunia
webdunia

ಹೀರೋ ಆಗ್ಬಿಟ್ರಿ ಸರ್.. ದರ್ಶನ್ ಜೈಲಿಗೆ ಕಳುಹಿಸಿದ ಎಸಿಪಿ ಚಂದನ್ ಗತ್ತು ನೋಡಿ

chandan kumar

Sampriya

ಬೆಂಗಳೂರು , ಶನಿವಾರ, 22 ಜೂನ್ 2024 (18:54 IST)
Photo Courtesy X
ಬೆಂಗಳೂರು:  ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅವರನ್ನು ಬಂಧಿಸಿ ಮೂರು ಬಾರಿ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ ಎಸಿಪಿ ಚಂದನ್ ಕುಮಾರ್ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಇಂದು ಪೊಲೀಸ್ ಕಸ್ಟಡಿ ಅವಧಿ ಮುಗಿದಿದ್ದರಿಂದ ನಟ ದರ್ಶನ್‌ರನ್ನು ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಮಾಡಲಾಗಿದೆ. ದರ್ಶನ್‌ರನ್ನು ಜೈಲಿಗೆ ಕಳುಹಿಸಿದ ಮೇಲೆ ಎಸಿಪಿ ಚಂದನ್ ಕುಮಾರ್ ಅವರು ಖುಷಿಯಲ್ಲಿ ನಗುತ್ತಾ ಕೈ ಮುಗಿದು ತೆರಳಿದ್ದಾರೆ.

ಕನ್ನಡ ಖ್ಯಾತ ಸ್ಟಾರ್‌ ನಟ, ಪ್ರಭಾವಿ ರಾಜಕೀಯ ಮುಖಂಡರ ಜತೆ ಗುರುತಿಸಿಕೊಂಡಿದ್ದ ನಟನನ್ನು ಯಾವುದೇ ಮುಲಾಜಿಲ್ಲದೆ ವಿಚಾರಣೆ ನಡೆಸಿದ ಎಸಿಪಿ ಚಂದನ್ ಕುಮಾರ್ ಕರ್ತವ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಅದಲ್ಲದೆ ಇಂದು ದರ್ಶನ್‌ರನ್ನು ಜೈಲಿಗೆ ಕಳುಹಿಸಿದ ಬಳಿಕ ಚಂದನ್ ಖುಷಿಯ ನಗೆ ಬೀರಿದ್ದಾರೆ. ಈ ವೇಳೆ ಅವರ ಸಹಪಾಠಿಗಳು 'ಸರ್ ನೀವು ಸೂಪರ್, ನೀವು ಹೀರೋ ಆಗಿ ಬಿಟ್ರಿ' ಎಂದು ಎಂದು ಹೇಳಿದ್ದಾರೆ.

ಕೊಲೆ ಪ್ರಕರಣದಲ್ಲಿ ಶರಣಾದ ಆರೋಪಿಗಳನ್ನು ಬಾಯಿಸಬಿಡಿಸಿದಾಗ ನಟ ದರ್ಶನ್ ಅವರ ಹೆಸರು ಕೇಳಿಬಂದಿದೆ.  ದರ್ಶನ್ ಹೆಸರು ಬರುತ್ತಿರುವಾಗಲೇ ಫೀಲ್ಡ್‌ಗಿಳಿದ ಚಂದನ್ ಅವರು ನೇರವಾಗಿ ದರ್ಶನ್ ಇದ್ದ ಹೊಟೇಲ್‌ಗೆ ಹೋಗಿ ಅವರನ್ನು ಪೊಲೀಸ್ ದಾಟಿಯಲ್ಲೇ ವಶಕ್ಕೆ ಪಡೆದಿದ್ದರು.

ಕೊಲೆ ಪ್ರಕರಣವನ್ನು ತೀವ್ರವಾಗಿ ವಿಚಾರಣೆ ನಡೆಸಿದ ಎಸಿಪಿ ಚಂದನ್ ನೇತೃತ್ವದ ತಂಡ ಹೈಕೋರ್ಟ್ ಆದೇಶದಂತೆ ಇದೀಗ ಎಲ್ಲ ಆರೋಪಿಗಳನ್ನು ಪರಪ್ಪನ ಅಗ್ರಹಾರಕ್ಕೆ ಕಳುಹಿಸಲಾಗಿದೆ.

ಆರೋಪಿಗಳಿಂದ ಕೊಲೆ ಪ್ರಕರಣದ ಇಂಚಿಂಚು ಮಾಹಿತಿಯನ್ನು ಕಲೆ ಹಾಕಿದ ಎಸಿಪಿ ಚಂದನ್ ಅವರು ನಟ ದರ್ಶನ್ ಅವರನ್ನು ಮೂರು ಬಾರಿ ಪೊಲೀಸ್ ಕಸ್ಟಡಿಗೆ ಕೇಳಿ ವಿಚಾರಣೆ ನಡೆಸಿದ್ದರು. ಇಂದು ದರ್ಶನ್, ವಿನಯ್, ಪ್ರದೋಶ್ ಸೇರಿದಂತೆ ನಾಲ್ವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಅದರಂತೆ ದರ್ಶನ್ ಅವರನ್ನು ಪರಪ್ಪನ ಅಗ್ರಹಾರಕ್ಕೆ ಕಳುಹಿಸಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಎರಡು ಗುಂಪುಗಳ ನಡುವೆ ಶುರುವಾದ ಜಗಳ ಚಿನ್ಮಯಾನಂದ ಸ್ವಾಮೀಜಿ ಹತ್ಯೆಯಲ್ಲಿ ಅಂತ್ಯ