Publish Date: Mon, 11 Mar 2019 (16:16 IST)
Updated Date: Mon, 11 Mar 2019 (16:18 IST)
ಚುನಾವಣಾ ದಿನಾಂಕ ಪ್ರಕಟವಾಗ್ತಿದ್ದಂತೆ ಮೈಕೊಡವಿ ಎದ್ದ ಕಟೀಲು ಮದ್ಯರಾತ್ರಿ ಮಾಡಿರುವ ಕ್ರಮ ವ್ಯಾಪಕ ಟೀಕೆಗೆ ಗುರಿಯಾಗಿದೆ.
ನಳೀನ್ ಕುಮಾರ್ ಕಟೀಲ್ ಬಿಜೆಪಿ ಸಂಸದರಾಗಿದ್ದಾರೆ. ಟ್ವಿಟರ್ ನಲ್ಲಿ ಮತದಾರರಿಗೆ ಪ್ರಚೋದನೆ ನೀಡಿದ್ದಾರೆ. ರಾತ್ರಿ 3 ಗಂಟೆಗೆ ಶತ್ರು ದೇಶಕ್ಕೆ ನುಗ್ಗಿ ಹೊಡೆಯುವಂತೆ ಆದೇಶ ಮಾಡಿದ್ದಾರೆ. ಆದೇಶ ನೀಡುವವರಿಗೆ ಮತಹಾಕಬೇಕು ಎಂದಿರುವ ಅವರು, ಅದು ಬಿಟ್ಟು 3 ಗಂಟೆಗೆ ಉಗ್ರರಿಗೆ ಸುಪ್ರೀಂ ಬಾಗಿಲು ತೆಗೆಸುವರಿಗಲ್ಲ ಎಂದು ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
ನಿಮ್ಮ ವೋಟನ್ನ ಕಾಂಗ್ರೆಸ್ ಗೆ ಹಾಕಬೇಡಿ, ಬಿಜೆಪಿಗೆ ಹಾಕಿ ಎಂದ ಕಟೀಲು ಮನವಿ ಮಾಡಿದ್ದಾರೆ. ಸೈನ್ಯದ ವಿಚಾರ ಪ್ರಚಾರಕ್ಕೆ ಬಳಸಿಕೊಳ್ಳದಂತೆ ಸೂಚನೆ ಇದೆ. ಕೇಂದ್ರ ಚುನಾವಣಾ ಆಯೋಗ ನಿನ್ನೆಯಷ್ಟೇ ಎಚ್ಚರಿಸಿದೆ. ಆದರೂ ಕಟೀಲು ಚುನಾವಣೆ ವಿಷಯಕ್ಕೆ ಸೈನ್ಯವನ್ನು ಎಳೆದು ತಂದಿದ್ದಾರೆ.