Publish Date: Mon, 11 Mar 2019 (16:11 IST)
Updated Date: Mon, 11 Mar 2019 (16:13 IST)
ಚುನಾವಣೆ ಕಣ ರಂಗೇರುತ್ತಿರುವಂತೆ ರಾಜಕೀಯ ದಾಳಗಳು ಒಂದೊಂದಾಗಿ ಉರುಳುತ್ತಿವೆ.
ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಗೆ ಎಸ್.ಎಂ.ಕೃಷ್ಣ ಪರೋಕ್ಷ ಸಮ್ಮತಿ ನೀಡಿದ್ದಾರೆ. 25 ವರ್ಷ ವಯಸ್ಸಾಗಿರುವವರು ಯಾರು ಬೇಕಾದರೂ ಚುನಾವಣೆಯಲ್ಲಿ ಸ್ಪರ್ಧಿಸಬಹುದು.
ಸ್ಪರ್ಧೆ ಮಾಡೋದಕ್ಕೆ ಯಾವುದೇ ವಿರೋಧವಿಲ್ಲ. ಸ್ಪರ್ಧಿಸಿದಾಗ ಜನ ತುಲನೆ ಮಾಡುತ್ತಾರೆ. ನಮ್ಮ ಅಭ್ಯರ್ಥಿನಾ… ನಮ್ಮ ಅಭ್ಯರ್ಥಿನಾ ಅಂತಾ ಜನ ನಿರ್ಧರಿಸುತ್ತಾರೆ.
ಜತೆಗೆ ಕುಟುಂಬ ರಾಜಕಾರಣ ಮಾಡಬಾರದು ಎಂದು ರಾಜ್ಯಾಂಗದಲ್ಲಿ ನಿರ್ಬಂಧವೇನಿಲ್ಲ. .ದೇವೇಗೌಡರ ಕುಟುಂಬ ವರ್ಗದವರು ಚುನಾವಣೆಯಲ್ಲಿ ಸ್ಪರ್ಧಿಸಲು ಅಡ್ಡಿಯಿಲ್ಲ ಅಂತ ಎಸ್.ಎಂ.ಕೃಷ್ಣ ಹೇಳಿದ್ದಾರೆ.