Publish Date: Wed, 07 Mar 2018 (09:01 IST)
Updated Date: Wed, 07 Mar 2018 (09:08 IST)
ಬೆಂಗಳೂರು: ಕೆಪಿಜೆಪಿ ಪಕ್ಷದಿಂದ ನಟ ಉಪೇಂದ್ರ ಹೊರ ಬಿದ್ದಾಗಿದೆ. ಇದಕ್ಕೆ ಕೆಪಿಜೆಪಿ ಸಂಸ್ಥಾಪಕ ಮಹೇಶ್ ಗೌಡ ಜತೆಗಿನ ಭಿನ್ನಾಭಿಪ್ರಾಯವೇ ಕಾರಣ ಎನ್ನುವುದು ಗೊತ್ತಾಗಿದೆ.
ಈ ಬಗ್ಗೆ ಉಪೇಂದ್ರ ಪತ್ನಿ ಪ್ರಿಯಾಂಕಾ ಉಪೇಂದ್ರ ಮಾಧ್ಯಮದ ಬಳಿ ಹೇಳಿಕೊಂಡಿದ್ದಾರೆ. ಮಹೇಶ್ ಗೌಡ ನಮ್ಮ ಜತೆ ಚೆನ್ನಾಗಿಯೇ ಇದ್ದರು. ನಮ್ಮ ಮನೆಗೆ ಬಂದು ಊಟ ಮಾಡಿದ್ದರು. ಆದರೆ ಇದ್ದಕ್ಕಿದ್ದ ಹಾಗೇ ಅವರು ಉಪ್ಪಿ ಮೇಲೆ ಹೀಗೆಲ್ಲಾ ಆರೋಪ ಮಾಡುತ್ತಿರುವುದು ಏಕೆ ಗೊತ್ತಾಗುತ್ತಿಲ್ಲ ಎಂದು ಪ್ರಿಯಾಂಕಾ ಉಪೇಂದ್ರ ಹೇಳಿದ್ದಾರೆ.
ಅಷ್ಟೇ ಅಲ್ಲ, ಉಪೇಂದ್ರ ಜತೆ ಭಿನ್ನಾಭಿಪ್ರಾಯಗಳಿದ್ದರೆ ಮೊದಲೇ ಹೇಳಬೇಕಿತ್ತು. ಪಕ್ಷಕ್ಕೆ ಹೆಸರು ಬರುವವರೆಗೂ ಉಪೇಂದ್ರ ಬೇಕಿತ್ತು. ಈಗ ತಾನು ಸಂಸ್ಥಾಪಕ ಎಂಬ ಅಹಂ ಅವರಿಗೆ ಬಂದಿದೆ. ಹೆಸರು ಬಂದ ತಕ್ಷಣ ಹೀಗೆಲ್ಲಾ ವರ್ತಿಸುವುದಕ್ಕೆ, ಆರೋಪ ಮಾಡುವುದಕ್ಕೆ ಕಾರಣವೇನು? ಎಂದು ಪ್ರಿಯಾಂಕ ಪ್ರಶ್ನಿಸಿದ್ದಾರೆ.
ಇದೇ ವೇಳೆ ಪತಿ ಉಪೇಂದ್ರರ ಹೊಸ ಪಕ್ಷ ಸ್ಥಾಪನೆ ನಿರ್ಧಾರವನ್ನು ಅವರು ಸ್ವಾಗತಿಸಿದ್ದಾರೆ. ಉಪೇಂದ್ರ ನಿರ್ಧಾರದಿಂದ ಒಳ್ಳೆಯದೇ ಆಗಿದೆ. ಅವರು ತಮ್ಮ ಕನಸನ್ನು ಈ ಮೂಲಕ ಸಾಧಿಸಲಿದ್ದಾರೆ ಎಂದು ಪ್ರಿಯಾಂಕಾ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ