ಟೀ ಅಂಗಡಿ ಮುಂದೆ ಕಸ ಗುಡಿಸುತ್ತಿದ್ದ ಮಹಿಳೆಗೆ ಆದದ್ದಾದರೂ ಏನು?

Webdunia
ಸೋಮವಾರ, 23 ಜುಲೈ 2018 (14:59 IST)
ಆ ಮಹಿಳೆ ಎಂದಿನಂತೆ ನಸುಕಿನ ಜಾವ ತಮ್ಮ ಮನೆ, ಟೀ ಅಂಗಡಿ ಮುಂದೆ ಕಸ ಗುಡಿಸುತ್ತಿದ್ದಳು. ಆದರೆ ಇಂದೆಕೋ ಆಕೆಯ ಗ್ರಹಚಾರ ಸರಿಯಾಗಿದ್ದಿಲ್ಲ ಎನಿಸುತ್ತದೆ. ಬೆಳ್ಳಂಬೆಳಗ್ಗೆ ಆ ಮಹಿಳೆ ಗಾಬರಿಯಾಗಿದ್ದಾಳೆ. ಅಂಥದ್ದೇನಾಯ್ತು? ಎನ್ನೋದನ್ನು ತಿಳಿಯಲು ಮುಂದೆ ಓದಿ…

ಬೈಕ್ ನಲ್ಲಿ ಬಂದ ಅಪರಿಚಿರಿಬ್ಬರು ಟೀ ಅಂಗಡಿಯ ಮುಂದೆ ಕಸ ಗುಡಿಸುತ್ತಿದ್ದ  ಮಹಿಳೆಯ ಸರ ಕಸಿದು ಪರಾರಿಯಾಗಿರುವ ಘಟನೆ ನಡೆದಿದೆ. ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ಸುಭಾಷ್ ನಗರದಲ್ಲಿ ಘಟನೆ ನಡೆದಿದೆ. ಸುಭಾಷ್ ನಗರದಲ್ಲಿ ನಸುಕಿನ ಜಾವ ಸುಮಾರು 5.30 ಗಂಟೆಯ ಸಮಯದಲ್ಲಿ ಘಟನೆ ನಡೆದಿದೆ. ರತ್ನಮ್ಮ ಚಿನ್ನದ ಸರ ಕಳೆದುಕೊಂಡ ಮಹಿಳೆಯಾಗಿದ್ದಾರೆ. ಸುಭಾಷ್ ನಗರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಚೇರಿ ಕಟ್ಟಡದಲ್ಲಿರುವ ತಮ್ಮ ಟೀ ಕ್ಯಾಂಟೀನ್ ಆರಂಭಿಸುವ ಸಲುವಾಗಿ ಅಂಗಡಿಯ ಮುಂದೆ ಕಸ ಗುಡಿಸುವಲ್ಲಿ ನಿರತರಾಗಿದ್ದರು. ವೇಳೆ ಟೀ ಕುಡಿಯುವ ಸೋಗಿನಲ್ಲಿ ಬೈಕ್ ನಿಲ್ಲಿಸಿಕೊಂಡು ನಿಂತಿದ್ದ  ಇಬ್ಬರು ವ್ಯಕ್ತಿಗಳು ಹಿಂದಿನಿಂದ  ಬಂದು ಮಾಂಗಲ್ಯ ಸರ ಕಸಿದು ಪರಾರಿಯಾಗಿದ್ದಾರೆ ಎಂದು ರತ್ನಮ್ಮ ಮಾಹಿತಿ ನೀಡಿದ್ದಾರೆ.

ಕಳೆದ ವಾರದ ಹಿಂದಷ್ಟೆ ಬೈಕ್ ನಲ್ಲಿ ಬಂದ ಅಪರಿಚಿತರು ಪಟ್ಟಣದ ಮುತ್ತುರಾಯಸ್ವಾಮಿ ಬಡಾವಣೆಯಲ್ಲಿ ಜಗದಂಬಾ ಎಂಬುವರ ಮಾಂಗಲ್ಯ ಸರ ಕಸದ ಪರಾರಿಯಾಗಿದ್ದದ್ದರು. ಒಟ್ಟು 6೦ ಗ್ರಾಂ ಚಿನ್ನದ ಸರ ಕಳುವಾಗಿದೆ. ಕೆಆರ್ ಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮುಡಾ ಹಗರಣ: ತನಿಖಾ ಸ್ಥಿತಿಗತಿ ವರದಿ ಸಲ್ಲಿಸಿದ ಲೋಕಾಯುಕ್ತರು

ಬಿಹಾರ, ಉತ್ತರ ಪ್ರದೇಶ ನಡುವೆ ರಾಮ ಸೀತೆಯ ಬಾಂಧವ್ಯವಿದೆ: ಯೋಗಿ

ಸಿದ್ದರಾಮಯ್ಯ ಸರ್ಕಾರದಲ್ಲೂ ಭ್ರಷ್ಟಾಚಾರವಿದೆ: ಸಂತೋಷ್ ಹೆಗ್ಡೆ

ದೆಹಲಿ ಸ್ಫೋಟ ಪ್ರಕರಣ, ಮತ್ತೆ ತೆರೆದ ಲಾಲ್ ಕ್ವಿಲಾ ಮೆಟ್ಟೋ ನಿಲ್ದಾಣ

ಬಿಹಾರ ಮಹಾಘಟಬಂಧನ್‌ಗೆ ಹೀನಾಯ ಸೋಲು, ಲಾಲು ಕುಟುಂಬದಲ್ಲಿ ಭಾರೀ ಬೆಳವಣಿಗೆ

ಮುಂದಿನ ಸುದ್ದಿ
Show comments