ಗೃಹಲಕ್ಷ್ಮಿ ಹಣದ ಮೇಲೆ ಕಣ್ಣು ಹಾಕಿದ್ದ ಪಾಪಿ ಗಂಡ ಮಾಡಿದ್ದೇನು

Krishnaveni K
ಗುರುವಾರ, 24 ಅಕ್ಟೋಬರ್ 2024 (11:33 IST)
ದಾವಣಗೆರೆ: ಗೃಹಲಕ್ಷ್ಮಿ ಹಣದ ಸಕ್ಸಸ್ ಸ್ಟೋರಿ ನಡುವೆ ಇಲ್ಲೊಂದು ಅನಾಹುತವಾಗಿದೆ. ಪತ್ನಿಯ ಗೃಹಲಕ್ಷ್ಮಿ ಹಣದ ಮೇಲೆ ಕಣ್ಣು ಹಾಕಿದ್ದ ಪಾಪಿ ಪತಿ ಮಾಡಿದ್ದನ್ನು ಕೇಳಿದರೆ ಆಕ್ರೋಶಗೊಳ್ಳುತ್ತಾರೆ.

ದಾವಣಗೆರೆಯ ಒಡೆಯರಹಳ್ಳಿ ಗ್ರಾಮದಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣ ಕೊಡಲಿಲ್ಲವೆಂದು ಪಾಪಿ ಪತಿ ಪತ್ನಿಯನ್ನೇ ಹತ್ಯೆ ಮಾಡಿರುವ ಧಾರುಣ ಘಟನೆ ನಡೆದಿದೆ. ಬ್ಯಾಂಕ್ ಗೆ ಹೋಗಿದ್ದ ಪತ್ನಿಯನ್ನು ಪತಿ ಎಳೆದೊಯ್ದು ಹೊಡೆದು ಬಡಿದು ಹತ್ಯೆ ಮಾಡಿದ್ದಾನೆ.

ಸತ್ಯಮ್ಮ ಎಂಬ 42 ವರ್ಷದ ಮಹಿಳೆ ಮೃತಪಟ್ಟವರು. ಗಂಡ ಅಣ್ಣಪ್ಪ ಆಕೆಯನ್ನು ಕೊಲೆ ಮಾಡಿದ್ದಾನೆ. ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಯಡಿ ಮನೆಯ ಯಜಮಾನಿಗೆ 2,000 ರೂ. ಪ್ರತೀ ತಿಂಗಳು ಸಂದಾಯವಾಗುತ್ತದೆ. ಅದರಂತೆ ಸತ್ಯಮ್ಮ ತನ್ನ ಖಾತೆಗೆ ಬಂದಿದ್ದ ಗೃಹಲಕ್ಷ್ಮಿ ಹಣವನ್ನು ವಿತ್ ಡ್ರಾ ಮಾಡಲು ಬ್ಯಾಂಕ್ ಗೆ ಹೋಗಿದ್ದಳು.

ಆದರೆ ಆಕೆಯ ಗೃಹಲಕ್ಷ್ಮಿ ಹಣಕ್ಕೆ ಕಣ್ಣು ಹಾಕಿದ್ದ ಗಂಡ ಆಕೆಗೆ ಬ್ಯಾಂಕ್ ನಲ್ಲೇ ಹಣ ಕೊಡುವಂತೆ ಪೀಡಿಸಿದ್ದಾನೆ. ಕೊಡದೇ ಇದ್ದಾಗ ಆಕೆಯನ್ನು ಎಳೆದೊಯ್ದು ನಿರ್ಜನ ಪ್ರದೇಶದಲ್ಲಿ ಹತ್ಯೆ ಮಾಡಿದ್ದಾನೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸತ್ಯಮ್ಮ ತವರು ಮನೆಯವರು ಆರೋಪಿ ಕುಡುಕನಾಗಿದ್ದ. ಯಾವಾಗಲೂ ಸತ್ಯಮ್ಮನ ಜೊತೆ ಜಗಳವಾಡುತ್ತಿದ್ದ. ಆತನಿಗೂ ಸತ್ಯಮ್ಮನಂತೇ ನರಳಿ ನರಳಿ ಸಾಯುವಂತಹ ಶಿಕ್ಷೆ ಕೊಡಬೇಕು ಎಂದು ಆಗ್ರಹಿಸಿದ್ದಾರೆ. ಇದೀಗ ಆರೋಪಿಯನ್ನು ಬಂಧಿಸಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ತಿರುಕನ ಕನಸಿನಿಂದ ಮೊದಲು ಹೊರಬನ್ನಿ: ಪ್ರಿಯಾಂಕ್‌ ಖರ್ಗೆಗೆ ಸಿ.ಟಿ.ರವಿ ಟಾಂಗ್‌

ಯುವತಿ ಮೇಲೆ ಗ್ಯಾಂಗ್‌ರೇಪ್‌ ಬೆನ್ನಲ್ಲೇ ಮಹಿಳೆಯರ ಬಗ್ಗೆ ಸಿಎಂ ಮಮತಾ ಬ್ಯಾನರ್ಜಿ ವಿವಾದಾತ್ಮಕ ಹೇಳಿಕೆ

ಪಾಕಿಸ್ತಾನ ಮೇಲೆ ಮುಗಿಬಿದ್ದ ಅಫ್ಗನ್: ಗುಂಡಿನ ಕಾಳಗದಲ್ಲಿ 58 ಸೈನಿಕರ ಹತ್ಯೆ

ಸಾರ್ವಜನಿಕ ಸ್ಥಳಗಳಲ್ಲಿ ಆರ್‌ಎಸ್‌ಎಸ್‌ ಚಟುವಟಿಕೆಗಳಿಗೆ ನಿಷೇಧ ಹೇರಲು ಸಚಿವ ಪ್ರಿಯಾಂಕ್‌ ಖರ್ಗೆ ಒತ್ತಾಯ

ಆರ್‌ಎಸ್‌ಎಸ್‌ ಸಮವಸ್ತ್ರದಲ್ಲೇ ಧರಣಿ ಕುಳಿತ ಶಾಸಕ ಮುನಿರತ್ನ: ತಿರುಗೇಟು ನೀಡಿದ ಡಿಕೆಶಿ

ಮುಂದಿನ ಸುದ್ದಿ
Show comments