Webdunia - Bharat's app for daily news and videos

Install App

ಏಳು ಜನರನ್ನು ಬಲಿಪಡೆದ ಒಂಟಿ ಸಲಗ ಏನಾಯ್ತು?

Webdunia
ಸೋಮವಾರ, 26 ಆಗಸ್ಟ್ 2019 (18:55 IST)
ಏಳು ಜನರ ಸಾವಿಗೆ ಕಾರಣವಾಗಿದ್ದ ಒಂಟಿ ಸಲಗದ ಕಥೆ ಕೊನೆಗೂ ಹೀಗಾಗಿದೆ.

ಒಂಟಿ ಸಲಗವನ್ನು ಸೆರೆಹಿಡಿಯುವಲ್ಲಿ ತಮಿಳುನಾಡಿನ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಆನೇಕಲ್ ಬಳಿ ಮೂರು ತಿಂಗಳಿನಿಂದ ರೈತರ ನಿದ್ದೆಗೆಡಿಸಿದ್ದ ಪುಂಡಾನೆಯನ್ನು ಎರಡು ಸಾಕಾನೆಗಳನ್ನು ಬಳಸಿ ಸೆರೆಹಿಡಿಯಲಾಗಿದೆ. ಪುಂಡಾನೆ ಸೆರೆಯಿಂದ ಸುತ್ತಮುತ್ತಲಿನ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ತಮಿಳುನಾಡು ಗಡಿಭಾಗದ ಹೊಸೂರಿನಲ್ಲಿ ಪುಂಡಾನೆಗೆ ಅರಣ್ಯ ಇಲಾಖೆ ಖೆಡ್ಡಾ ತೋಡಿತ್ತು. ಗ್ರಾಮಸ್ಥರಲ್ಲಿ ಭಯ ಹುಟ್ಟುಹಾಕಿದ್ದ ಎರಡು ಸಲಗಗಳ ಪೈಕಿ ಒಂದು ಆನೆಯನ್ನು ಅರಣ್ಯ ಇಲಾಖೆ ಸೆರೆ ಹಿಡಿದಿದೆ. ಆನೆಗಳು 3 ತಿಂಗಳಿಂದ ತಮಿಳುನಾಡು ಹಾಗೂ ಕರ್ನಾಟಕ ಗಡಿಯ ಗ್ರಾಮಸ್ಥರ ನಿದ್ದೆಗೆಡಿಸಿದ್ದವು.

ಎಂಟು ದಿನಗಳ ಹಿಂದೆ ಸರ್ಜಾಪುರ ಸಮೀಪದ ತಿರುವರಂಗದಲ್ಲಿ ಇದೇ ಆನೆ ರೈತನೊಬ್ಬನನ್ನು ಸಾಯಿಸಿತ್ತು. ಆನೆಯ ಉಪಟಳಕ್ಕೆ ತಮಿಳುನಾಡಿನ ಹಾಗೂ ಕರ್ನಾಟಕ ಭಾಗದ ಅರಣ್ಯ ಅಧಿಕಾರಿಗಳು ಹೈರಾಣಾಗಿದ್ದರು. ಸೆರೆಹಿಡಿದಿರುವ ಆನೆಗೆ ಎರಡು ದಂತದಲ್ಲಿ ಒಂದು ದಂತ ಕೆಳಭಾಗಕ್ಕೆ ವಾಲಿ ಕೊಂಡಿದೆ.

ಇದರಿಂದಲೇ ಆನೆ ಎಲ್ಲಿ ಹೋದರೂ ಅರಣ್ಯ ಇಲಾಖೆ ಅಧಿಕಾರಿಗಳು ಗುರುತಿಸಲು ಸುಲಭವಾಗಿತ್ತು. ಕೊನೆಗೂ ತಮಿಳುನಾಡು ಅರಣ್ಯ ಇಲಾಖೆಯ ಅಧಿಕಾರಿಗಳು ಆನೆಯನ್ನು ಸೆರೆ ಹಿಡಿದಿದ್ದಾರೆ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಗೆಳೆಯ ಮೋದಿಗಾಗಿ ಕಾರಿನಲ್ಲೇ 10ನಿಮಿಷ ಕಾದು ಕುಳಿತ ರಷ್ಯಾ ಅಧ್ಯಜ್ಷ ಪುಟಿನ್

ಶೀಘ್ರದಲ್ಲೇ ಬಿಜೆಪಿ ವಿರುದ್ಧ ಹೈಡ್ರೋಜನ್ ಬಾಂಬ್ ಸಿಡಿಸುತ್ತೇವೆ: ರಾಹುಲ್ ಗಾಂಧಿ

ಧರ್ಮಸ್ಥಳ ಸೌಜನ್ಯ ಮನೆಗೆ ಭೇಟಿ ನೀಡಲು ಮುಂದಾದ ಬಿಜೆಪಿ ನಾಯಕರು

ಕೇರಳ ಯೂಟ್ಯೂಬರ್ ಶಾಜನ್ ಹತ್ಯೆಗೆ ಯತ್ನ, ಬೆಂಗಳೂರಿನಲ್ಲಿ ಆರೋಪಿಗಳು ಪೊಲೀಸ್‌ ವಶಕ್ಕೆ

ಬಿಜೆಪಿಯ ಯಾತ್ರೆಗಳ ಬಗ್ಗೆ ಸಿಎಂ ಸಿದ್ದರಾಮಯ್ಯ ಸ್ಫೋಟಕ ಹೇಳಿಕೆ

ಮುಂದಿನ ಸುದ್ದಿ
Show comments