Select Your Language

Notifications

webdunia
webdunia
webdunia
webdunia

ಭಾರತ್ ಬಂದ್ ಗೆ ಬೆಂಬಲಿಸುವ ಬಗ್ಗೆ ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳ ಸಂಘಟನೆಯ ಅಧ್ಯಕ್ಷರು ಹೇಳಿದ್ದೇನು?

ಭಾರತ್ ಬಂದ್ ಗೆ ಬೆಂಬಲಿಸುವ ಬಗ್ಗೆ ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳ ಸಂಘಟನೆಯ ಅಧ್ಯಕ್ಷರು ಹೇಳಿದ್ದೇನು?
ಬೆಂಗಳೂರು , ಮಂಗಳವಾರ, 7 ಜನವರಿ 2020 (11:24 IST)
ಬೆಂಗಳೂರು : ಕಾರ್ಮಿಕ ಸಂಘಟನೆಗಳಿಂದ ನಾಳೆ ಭಾರತ್ ಬಂದ್ ಗೆ ಕರೆ ನೀಡಿದ ಹಿನ್ನಲೆ ಬಂದ್ ಗೆ ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳು ಬೆಂಬಲ ನೀಡುವ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ ಎಂದು ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳ ಸಂಘಟನೆಯ  ಅಧ್ಯಕ್ಷ ಶಶಿಕುಮಾರ್ ಹೇಳಿದ್ದಾರೆ.



ನಾಳೆ ಭಾರತ್ ಬಂದ್ ಗೆ ಹಲವು ಸಂಘಟನೆಗಳು ಬೆಂಬಲ ಸೂಚಿಸಿದರೆ, ಇನ್ನೂ ಕೆಲವು ಸಂಘಟನೆಗಳು ಈ ಮುಷ್ಕರಕ್ಕೆ ಬೆಂಬಲ ನೀಡುವುದರ ಬಗ್ಗೆ ಇನ್ನೂ ತೀರ್ಮಾನಿಸಿಲ್ಲ.


ಇದೀಗ ಈ ಬಗ್ಗೆ ಮಾತನಾಡಿದ ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳ ಸಂಘಟನೆಯ  ಅಧ್ಯಕ್ಷ ಶಶಿಕುಮಾರ್ , ನಾಳಿನ ಪರಿಸ್ಥಿತಿ ನೋಡಿಕೊಂಡು ತೀರ್ಮಾನ ಕೈಗೊಳ್ಳಬೇಕು. ಶಾಲಾ ಆಡಳಿತ ಮಂಡಳಿಗಳೇ ತೀರ್ಮಾನ ಕೈಗೊಳ್ಳಬೇಕು. ಶಿಕ್ಷಕರು , ವಿದ್ಯಾರ್ಥಿಗಳ ರಕ್ಷಣೆ ಸರ್ಕಾರದ ಹೊಣೆಯಾಗಿದೆ. ಹೀಗಾಗಿ ಸರ್ಕಾರ ಈ ಬಗ್ಗೆ ತೀರ್ಮಾನಿಸಲಿ ಎಂದು ಹೇಳಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಡಿಸೋಜಾ ಹೇಳಿಕೆಗೆ ತಿರುಗೇಟು ಕೊಟ್ಟ ನಳೀನ್ ಕುಮಾರ್ ಕಟೀಲು