Select Your Language

Notifications

webdunia
webdunia
webdunia
Wednesday, 23 April 2025
webdunia

ಕೆಪಿಸಿಸಿ ಅಧ್ಯಕ್ಷರ ಖಡಕ್ಕಾಗಿ ಹೇಳಿದ್ದೇನು?

ಕೆಪಿಸಿಸಿ
ಬೆಂಗಳೂರು , ಶುಕ್ರವಾರ, 29 ಮಾರ್ಚ್ 2019 (13:12 IST)
ರಾಜ್ಯ ರಾಜಕೀಯದಲ್ಲಿ ಕೈ ಪಾಳೆಯದ ಬಂಡಾಯ ಅಭ್ಯರ್ಥಿಗಳಿಗೆ ಕಾಂಗ್ರೆಸ್ ಸರಿಯಾಗಿಯೇ ಬಿಸಿ ಮುಟ್ಟಿಸುತ್ತಿದೆ.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿಕೆ ನೀಡಿದ್ದು, ನಾನು, ಡಿಸಿಎಂ ಪರಮೇಶ್ವರ್ ಮನವೊಲಿಕೆ ಮಾಡಿದ್ದೇವೆ. ರಾಹುಲ್ ಗಾಂಧಿ ಸೂಚನೆಯಂತೆ ಪ್ರಯತ್ನ ಮಾಡಿದ್ದೇವೆ. ಹನುಮೇಗೌಡರ ಬಗ್ಗೆ ಬಹಳ ಗೌರವವಿದೆ. ಮೈತ್ರಿ ಆಧಾರದಲ್ಲಿ ಕೆಲವು ತೀರ್ಮಾನವಾಗಿದೆ. ಇದರಿಂದ ಮುದ್ದಹನುಮೇಗೌಡರಿಗೆ ಅನ್ಯಾಯವಾಗಿದೆ. ನಮಗೂ ತುಂಬಾ ನೋವಾಗಿದೆ. ಸಂಸದರಾಗಿ ಉತ್ತಮ ಹೆಸರು ಪಡೆದವರು. ರಾಜಕೀಯ ಬೆಳವಣಿಗೆಗಳು ಕೆಲವೊಮ್ಮೆ ಈಗೆ ಮಾಡುತ್ತವೆ
ಗೌರವಯುತವಾಗಿ ನಾವು ಅವರನ್ನ ನಡೆಸಿಕೊಳ್ತೇವೆ ಎಂದಿದ್ದಾರೆ.

ನಾಮಪತ್ರ ವಾಪಸ್ ಪಡೆಯುವಂತೆ ಮನವಿ ಮಾಡಿದ್ದೇವೆ. ಅವರ ಬಂಡಾಯದಿಂದ ಪಕ್ಷಕ್ಕೆ ನಷ್ಡವಾಗಲಿದೆ. ಹೀಗಾಗಿ ನಿರ್ಧಾರ ಬದಲಿಸುವಂತೆ ಮನವಿ ಮಾಡಿದ್ದೇವೆ. ಅವರು ಉತ್ತಮವಾಗಿ ರೆಸ್ಪಾನ್ಸ್ ಮಾಡಿದ್ದಾರೆ ಅಂತ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಮುದ್ದಹನುಮೇಗೌಡ ನಾಮಪತ್ರ ವಾಪಸ್ ?