ದುಬೈ ಕನ್ನಡಿಗರೊಂದಿಗೆ ಡಿಸಿಎಂ ವಿಡಿಯೋ ಸಂವಾದ ನಡೆಸಿದ್ದಾರೆ.
									
										
								
																	
ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ಅವರು ದುಬೈ ಕನ್ನಡಿಗರೊಂದಿಗೆ ಅವರೊಂದಿಗೆ ವಿಡಿಯೋ ಸಂವಾದ ನಡೆಸಿ, ಅಹವಾಲುಗಳನ್ನು ಆಲಿಸಿದ್ದಾರೆ.  
									
			
			 
 			
 
 			
					
			        							
								
																	ಲಾಕ್ ಡೌನ್ ಆದ ನಂತರ ಮೊದಲ ಬಾರಿಗೆ  ದುಬೈನಿಂದ ಕನ್ನಡಿಗರು ನಾಡಿಗೆ ಆಗಮಿಸಲಿದ್ದು, ಅವರನ್ನು ಸ್ವಾಗತಿಸಿದ ಡಿಸಿಎಂ,  ಸಮಾಜ ಕಲ್ಯಾಣ ಇಲಾಖೆಯಿಂದ ವಸತಿ ಶಾಲೆ, ವಸತಿ ನಿಲಯಗಳಲ್ಲಿ ಕ್ವಾರಂಟೈನ್ ನಲ್ಲಿರುವವರಿಗೆ ಉಚಿತ ಊಟೋಪಚಾರ ಮಾಡಲಾಗುತ್ತಿದೆ.
									
										
								
																	ಹೊರರಾಜ್ಯ, ಹೊರ ದೇಶಗಳಿಂದ ಆಗಮಿಸುವವರು ಇಚ್ಛಿಸಿದರೆ ವಸತಿ ನಿಲಯಗಳಲ್ಲಿ ಕ್ವಾರಂಟೈನ್ ನಲ್ಲಿಡಲು ವ್ಯವಸ್ಥೆ ಕಲ್ಪಿಸಲಾಗುವುದು ಎಂದಿದ್ದಾರೆ.
									
											
							                     
							
							
			        							
								
																	ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿರ್ದೇಶನ ಹಾಗೂ ನಿಬಂಧನೆಗಳನ್ನು ಒಪ್ಪಿ ಬರುವವರೆಗೆ ಕ್ವಾರಂಟೈನ್ ನಲ್ಲಿಟ್ಟು, ನಿಗಾವಹಿಸಲಾಗುವುದು ಎಂದಿದ್ದಾರೆ.