Select Your Language

Notifications

webdunia
webdunia
webdunia
webdunia

ಸ್ವಾಮೀಜಿ ಮತ್ತು ಸಿಎಂ ನಡುವೆ ನಡೆದ ಮಾತಿನ ಚಕಮಕಿಯ ಬಗ್ಗೆ ಶಾಸಕ ಮುರುಗೇಶ್ ಹೇಳಿದ್ದೇನು?

ದಾವಣಗೆರೆ
ದಾವಣಗೆರೆ , ಬುಧವಾರ, 15 ಜನವರಿ 2020 (10:54 IST)
ದಾವಣಗೆರೆ: ಶಾಸಕ ಮುರುಗೇಶ್ ನಿರಾಣಿಗೆ ಸಚಿವ ಸ್ಥಾನ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ನಿನ್ನೆ ಸಿಎಂ ಯಡಿಯೂರಪ್ಪ ಹಾಗೂ ಪಂಚಮಸಾಲಿ ಮಠದ ಸ್ವಾಮೀಜಿಗಳ ನಡುವೆ ಮಾತಿನ ಚಕಮಕಿ ನಡೆದಿತ್ತು.



ಈ ಬಗ್ಗೆ ಮಾತನಾಡಿದ ಮುರುಗೇಶ್ ನಿರಾಣಿ, ಸಿಎಂಗೆ ನನ್ನ ಮೇಲೆ ಯಾವುದೇ ಬೇಸರವಿಲ್ಲ. ಅವರ ಕೋಪಕ್ಕೆ ಅಪಾರ್ಥ ಮಾಡಿಕೊಳ್ಳುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.


ಅಲ್ಲದೇ ಸಿಎಂ ಯಡಿಯೂರಪ್ಪ ನನಗೆ ತಂದೆಯ ಸಮಾನ, 25 ವರ್ಷಗಳಿಂದ ಕುಟುಂಬ ಸದಸ್ಯರಂತಿದ್ದೇವೆ. ನನಗೆ ವಚನಾನಂದ ಶ್ರೀಗಳ ಬಗ್ಗೆಯೂ ಬೇಸರವಿಲ್ಲ. 115 ಮಂದಿಯೂ ಸಚಿವ ಸ್ಥಾನ ಆಕಾಂಕ್ಷಿಗಳು. ಯಾರು ಸಚಿವ ಸ್ಥಾನ ಬೇಡ ಅಂತಾರೆ ಹೇಳಿ? ಎಂದು ತಿಳಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಶುಭಾಶಯ ತಿಳಿಸಿದ ಸಿಎಂ