ಪ್ರಧಾನಿ ಮೋದಿ ಮತ್ತು ದೇಶದ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ ಯುವಕ ಅರೆಸ್ಟ್

ಮಂಗಳವಾರ, 14 ಜನವರಿ 2020 (10:30 IST)
ದಾವಣಗೆರೆ : ವಾಟ್ಸಾಪ್ ಗ್ರೂಪ್ ನಲ್ಲಿ ಪ್ರಧಾನಿ ಮೋದಿ ಮತ್ತು ದೇಶದ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.ಬಂಗಾರದ ಪಾಲಿಶ್ ಕೆಲಸಮಾಡುವ ಯುವಕ ಟಿಪ್ಪು ಸುಲ್ತಾನ್ ಬಾಯ್ಸ್  ಎಂದು ವಾಟ್ಸಾಪ್ ಗ್ರೂಪ್ ಮಾಡಿ ಅದರಲ್ಲಿ ಪ್ರಧಾನಿ ಮೋದಿ ಮತ್ತು ದೇಶದ ಕಾನೂನು ಸುವ್ಯವಸ್ಥೆ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ್ದಲ್ಲದೇ ಪಾಕಿಸ್ತಾನದ ಬಾವುಟವನ್ನು ಪೋಸ್ಟ್ ಮಾಡಿದ್ದಾನೆ.


ಇದು ಹಿಂದೂ ಜಾಗರಣ ವೇದಿಕೆಯ ಕೆಂಗೆಣ್ಣಿಗೆ ಕಾರಣವಾಗಿದ್ದ ಕಾರಣ ಯುವಕನ ವಿರುದ್ಧ ಬಸವನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಬಗ್ಗೆ ಪ್ರಕರಣ ದಖಲಿಸಿಕೊಂಡ ಪೊಲೀಸರು ಯುವಕನನ್ನು ವಶಕ್ಕೆ ಪಡೆದಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಮತ್ತೊಂದು ಡಿಸಿಎಂ ಹುದ್ದೆ ಸೃಷ್ಟಿಯಾಗುವ ಬಗ್ಗೆ ಡಿಸಿಎಂ ಗೋವಿಂದ ಕಾರಜೋಳ ಹೇಳಿದ್ದೇನು?