Publish Date: Mon, 06 May 2019 (15:32 IST)
Updated Date: Mon, 06 May 2019 (15:35 IST)
ನ್ಯಾಯ ಬೇಕೆಂದು ಹಲವು ಜನರು, ಸಂಘಟನೆಗಳು ವಿವಿಧ ರೀತಿಯ ಧರಣಿ, ಪ್ರತಿಭಟನೆ ನಡೆಸುತ್ತಲೇ ಇರುವುದು ಸಾಮಾನ್ಯ. ಆದರೆ ಈ ಆಸಾಮಿ ಮಾಡಿರುವ ಘಟನೆ ಗಮನ ಸೆಳೆದಿದೆ.
ವಿದ್ಯುತ್ ಕಂಬವೇರಿದ ಅಪರಿಚಿತ ವ್ಯಕ್ತಿ ತನಗೆ ನ್ಯಾಯ ಬೇಕೆಂದು ಆಗ್ರಹ ಮಾಡಿದ್ದಾನೆ.
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕು ಕಾಂತರಾಜ ಸರ್ಕಲ್ ಬಳಿ ವಿದ್ಯುತ್ ಕಂಬವೇರಿದ ಅಪರಿಚಿತ ವ್ಯಕ್ತಿ ಕೆಲ ಕಾಲ ಆತಂಕ ಸೃಷ್ಟಿ ಮಾಡಿದ್ದನು.
ತನಗೆ ಹಾಗೂ ತನ್ನ ಕುಟುಂಬಕ್ಕಾಗಿರುವ ಅನ್ಯಾಯದಿಂದ ಬೇಸತ್ತು ಕಂಬವೇರಿ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ್ದನು.
ಸ್ಥಳಕ್ಕೆ ಮುಳಬಾಗಿಲು ಗ್ರಾಮಾಂತರ ಠಾಣಾ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದರು. ಕಂಬವೇರಿರುವ ವ್ಯಕ್ತಿಯ ಮನವೊಲಿಸುವ ಯತ್ನ ಮಾಡಿದ್ರು. ಮಾಧ್ಯಮದವರು ಸ್ಥಳಕ್ಕೆ ಬರುವಂತೆ ಕಂಬ ಏರಿದ ವ್ಯಕ್ತಿ ಆಗ್ರಹ ಮಾಡಿದ ಘಟನೆ ನಡೆಯಿತು.