Publish Date: Wed, 02 Jan 2019 (14:13 IST)
Updated Date: Wed, 02 Jan 2019 (14:16 IST)
ಶ್ರೀರಾಮನ ಕುರಿತು ಪ್ರೊ. ಕೆ.ಎಸ್.ಭಗವಾನ್ ವಿವಾದಾತ್ಮಕ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗ್ಗಡೆ ತೀಕ್ಷ್ಣ ಮಾತಿನಲ್ಲಿ ಕುಟುಕಿದ್ದಾರೆ.
ಪ್ರೊ. ಭಗವಾನ್ ರಾಮನನ್ನ ನಿಂದಿಸಿ ನಿಂದಾಸ್ತುತಿ ಮಾಡಿದ್ದಾರೆ. ರಾಮನನ್ನ ನಿಂದಿಸಿ ಬೇಗ ಮೋಕ್ಷ ಪಡೆಯಲು ನಿರ್ಧರಿಸಿದ್ದಾರೇನೋ..? ಎಂದಿದ್ದಾರೆ.
ಜಯ ವಿಜಯರು ಶತ್ರುತ್ವದಿಂದ ಮೂರು ಜನ್ಮದಲ್ಲಿ ಮೋಕ್ಷಪಡೆದು ಭಗವಂತನ ಸಾನಿಧ್ಯ ಸೇರಿದ್ದರು. ಭಗವಾನರು ಮೂರೇ ಜನ್ಮದಲ್ಲಿ ಮೋಕ್ಷ ಪಡೆಯುವ ಆಸೆಯಲ್ಲಿ ಇರಬಹುದೇನೋ..? ಎಂದಿದ್ದಾರೆ.
ನಾವು ಮಾತ್ರ ಶ್ರೀರಾಮನನ್ನ ಜಪಿಸಿ ಏಳು ಜನ್ಮದಲ್ಲಿ ಹಾಗೇ ಇರುತ್ತೇವೆ ಎಂದು ಧರ್ಮಸ್ಥಳದಲ್ಲಿ ಡಾ. ವಿರೇಂದ್ರ ಹೆಗ್ಗಡೆ ಹೇಳಿಕೆ ನೀಡಿದ್ದಾರೆ.