Select Your Language

Notifications

webdunia
webdunia
webdunia
webdunia

ಕಾರ್ಯಾಧ್ಯಕ್ಷರ ಹುದ್ದೆ ಸೃಷ್ಟಿಸುವ ಬಗ್ಗೆ ಡಿಕೆಶಿ ಹೇಳಿದ್ದೇನು?

ಕಾರ್ಯಾಧ್ಯಕ್ಷರ ಹುದ್ದೆ ಸೃಷ್ಟಿಸುವ ಬಗ್ಗೆ ಡಿಕೆಶಿ ಹೇಳಿದ್ದೇನು?
ಬೆಂಗಳೂರು , ಶುಕ್ರವಾರ, 17 ಜನವರಿ 2020 (11:00 IST)
ಬೆಂಗಳೂರು : ಕಾರ್ಯಾಧ್ಯಕ್ಷರ ಹುದ್ದೆ ಸೃಷ್ಟಿಸುವಂತೆ ಸಿದ್ದರಾಮಯ್ಯ ಹಾಕಿದ ಷರತ್ತಿಗೆ ಡಿಕೆಶಿವಕುಮಾರ್ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.



ಹಾಲಿ ಕಾರ್ಯಾಧ್ಯಕ್ಷರ ಹುದ್ದೆ ಮುಂದುವರಿಯಲಿ ಆದರೆ ಹೊಸದಾಗಿ ಕಾರ್ಯಾಧ್ಯಕ್ಷರ ಹುದ್ದೆ ಸೃಷ್ಟಿಸುವುದು ಬೇಡ. ಇದರಿಂದ ಅನಗತ್ಯ ಗೊಂದಲವಾಗಲಿದೆ. ನಾನು ಎಲ್ಲಾ ಜಾತಿ   ಮುಖಂಡರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳವೆ. ಪಕ್ಷವನ್ನು ಕಟ್ಟಲು ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯುತ್ತೇನೆ. ಯಾವುದೇ ಕಾರಣಕ್ಕೂ ಕಾರ್ಯಾಧ್ಯಕ್ಷ ಹುದ್ದೆ ಸೃಷ್ಟಿ ಬೇಡ ಎಂದು ಡಿಕೆಶಿ ಹೈಕಮಾಂಡ್ ಎದುರು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.


ಅಲ್ಲದೇ ಸಂಪೂರ್ಣ ಸ್ವಾತಂತ್ರ್ಯ ನೀಡಿ ಯಾವುದೇ ಹುದ್ದೆ ಸೃಷ್ಟಿಸದೆ ನನಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡುವುದಾದರೆ ನೀಡಿ ಇಲ್ಲದಿದ್ರೆ ಈಗ ಇರುವಂತೆ ಇರುತ್ತೇನೆ ಎಂದು ಡಿಕೆಶಿ ಅಸಮಾಧಾನ ಹೊರಹಾಕಿದ್ದು, ಇದೀಗ ಅವರ ಮನವೊಲಿಸಲು ಕೆಸಿ ವೇಣುಗೋಪಾಲ್, ಅಹ್ಮದ್ ಪಟೇಲ್ ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಡಿಕೆಶಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಲು ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದರೂ ಇನ್ನೂ ಅನೌನ್ಸ್ ಆಗಲಿಲ್ಲ ಯಾಕೆ ಗೊತ್ತಾ?