Publish Date: Tue, 02 Apr 2019 (20:05 IST)
Updated Date: Tue, 02 Apr 2019 (20:06 IST)
ಅಪ್ಪನ ಗೆಲುವಿಗೆ ಸಿಎಂ ಈ ಕೆಲಸವನ್ನು ಮಾಡಿದ್ದಾರೆ.
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಪರ ಸಿಎಂ ಪ್ರಚಾರ ಶುರುಮಾಡಿದ್ದಾರೆ. ಅಪ್ಪನ ಗೆಲುವಿಗೆ ಹೋಮ ಹವನಗಳ ಮೊರೆ ಹೋಗಿದ್ದಾರೆ.
ತುಮಕೂರಿನಲ್ಲಿ ಅಪ್ಪನ ಗೆಲುವಿಗೆ ವಿಶೇಷ ಪೂಜೆ ಸಲ್ಲಿಸಿದ ಸಿಎಂ ಹೆಚ್. ಡಿ.ಕುಮಾರಸ್ವಾಮಿ, ಪಟ್ಟನಾಯಕನಹಳ್ಳಿ ಯ ಗುರುಗುಂಡೆ ಬ್ರಹ್ಮೇಶ್ವರ ದೇವಸ್ಥಾನದಲ್ಲಿ ಹೋಮ ಹವನದಲ್ಲಿ ಪಾಲ್ಗೊಂಡರು.
ಲಲಿತಾ ಸಹಸ್ರನಾಮ ಹೋಮ, ಧನ್ವಂತರಿ ಹೋಮ, ಶಿವಗಾಯತ್ರಿ ಹೋಮ, ಆದಿತ್ಯಾದಿ ನವಗ್ರಹ ಹೋಮದಲ್ಲಿ ಪಾಲ್ಗೊಂಡರು.
ಚುನಾವಣೆಯಲ್ಲಿ ವಿಜಯ ಪ್ರಾಪ್ತಿಗೆ, ವಿಘ್ನಗಳ ನಿವಾರಣೆ, ಲೋಪದೋಷ ನಿವಾರಣೆ, ಗಂಡಾಂತರ ನಿವಾರಣೆಗೆ ಹೋಮ ನಡೆಸಲಾಗಿದೆ.
Jagadeesh
Publish Date: Tue, 02 Apr 2019 (20:05 IST)
Updated Date: Tue, 02 Apr 2019 (20:06 IST)