ಕೃಷಿ ಜಮೀನುಗಳಲ್ಲಿ ಅರಣ್ಯ ಗಿಡಗಳನ್ನು ಬೆಳೆಸಿದರೆ ಏನಾಗುತ್ತದೆ ಎಂದು ಕೆಲವು ರೈತರು ಗೊಂದಲದಲ್ಲಿದ್ದಾರೆ.
ಅರಣ್ಯ ಗಿಡಗಳನ್ನು ಬೆಳೆಸಿದರೆ ಉತ್ತಮ ಆದಾಯ ತಂದುಕೊಡುವ ಮೂಲಕ ವಿಪತ್ತಿನ ಕಾಲದಲ್ಲಿ ವಿಮೆಯಂತೆ ರೈತನನ್ನು ಕಾಪಾಡುತ್ತವೆ. ರೈತರು ಅರಣ್ಯಾಧಾರಿತ ಕೃಷಿಗೆ ಒತ್ತು ನೀಡಿ ಎಂದಿದ್ದಾರೆ ಹಾವೇರಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್.ಇ.ಕ್ರಾಂತಿ.
ಪ್ರಾದೇಶಿಕ ಅರಣ್ಯ ವಿಭಾಗದಿಂದ 2 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ 15.15 ಲಕ್ಷ ಸಸಿಗಳು, ಸಾಮಾಜಿಕ ಅರಣ್ಯ ವಿಭಾಗದಿಂದ 139 ಹೆಕ್ಟೇರ್‍ನಲ್ಲಿ 5 ಲಕ್ಷ ಸಸಿಗಳು ಸೇರಿ ಒಟ್ಟು 2139 ಹೆಕ್ಟೇರ್ ಪ್ರದೇಶದಲ್ಲಿ 20.15 ಲಕ್ಷ ಸಸಿಗಳನ್ನು ರಸ್ತೆಯ ಇಕ್ಕೆಲಗಳಲ್ಲಿ, ಅರಣ್ಯ ವನಮಹೋತ್ಸವ ಕಾರ್ಯಕ್ರಮ, ಶಾಲಾ-ಕಾಲೇಜುಗಳ ಖಾಲಿ ನಿವೇಶನಗಳಲ್ಲಿ ಹಾಗೂ ರೈತರ ಹೊಲದಲ್ಲಿ ನೆಡಲಾಗುತ್ತಿದೆ ಎಂದಿದ್ದಾರೆ.