Publish Date: Fri, 05 Jun 2020 (16:33 IST)
Updated Date: Fri, 05 Jun 2020 (16:34 IST)
ನಾಯಿಯನ್ನು ಬೇಟೆಯಾಡಲು ಹೋಗಿದ್ದ ಚಿರತೆಯೇ ಸಾವನ್ನಪ್ಪಿದ ಘಟನೆ ನಡೆದಿದೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹೇಮಗುಡ್ಡ ಬಳಿ ನಾಯಿಯನ್ನು ಬೇಟೆಯಾಡಿ ಹೊತ್ತೊಯ್ಯುತ್ತಿದ್ದ ಚಿರತೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದೆ.
ನಸುಕಿನ ವೇಳೆ ನಾಯಿ ಬೇಟೆಯಾಡಿರುವ ಚಿರತೆ ಅದನ್ನು ಹೊತ್ತು ರಸ್ತೆ ದಾಟುವಾಗ ಲಾರಿಯೊಂದು ವೇಗವಾಗಿ ಬಂದ ಪರಿಣಾಮ ಸಾವನ್ನಪ್ಪಿದೆ.
ಬೆಳಗಿನ ಜಾವ ರಸ್ತೆ ಪಕ್ಕದಲ್ಲಿ ಸತ್ತು ಬಿದ್ದ ಚಿರತೆಯನ್ನು ಕಂಡ ಸ್ಥಳೀಯರು ಅರಣ್ಯ ಇಲಾಖೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.