Select Your Language

Notifications

webdunia
webdunia
webdunia
Saturday, 5 April 2025
webdunia

ರಾಷ್ಟ್ರ ರಾಜ್ಯಕ್ಕೂ ಶಕ್ತಿಯನ್ನ ಮೀರಿ ನಾವು ಕೆಲಸ ಮಾಡ್ತೇವಿ- ಎಚ್ ಡಿ ದೇವೇಗೌಡ

We will work beyond the power of the nation
bangalore , ಭಾನುವಾರ, 11 ಡಿಸೆಂಬರ್ 2022 (14:17 IST)
ಜೆಡಿಎಸ್ ಪಕ್ಷಕ್ಕೆ ಹಲವು ಮುಖಂಡರು ಸೇರ್ಪಡೆ ಕಾರ್ಯಕ್ರಮ ನಡೆಯುತ್ತಿದ್ದು,ಚಾಮರಾಜಪೇಟೆಯಿಂದ  ಸುಮಾರು 53 ಮುಖಂಡರು ಜೆಡಿಎಸ್ ಗೆ ಸೇರ್ಪಡೆಗೊಂಡಿದ್ದಾರೆ.ಚಾಮರಾಜಪೇಟೆಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಗೋವಿಂದ ರಾಜು, ಮಾಜಿ ಉಪ ಮೇಯರ್  ರಾಮೇಗೌಡರು,ಪಾಲಿಕೆಯ ಮಾಜಿ ಸದಸ್ಯರಾದ  ಗೌರಮ್ಮ, ಕಾಂಗ್ರೆಸ್ ಪಕ್ಷದ ನಾಯಕರಾದ ಶೇಖರ್, ದೊರೆ ಸೇರಿ ಅನೇಕ ಮುಖಂಡರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದು,ಮಾಜಿ ಪ್ರಧಾನಿ ಹೆಚ್ ಡಿ ದೆವೇಗೌಡರ, ಮಾಜಿ ಸಿಎಂ ಕುಮಾರಸ್ವಾಮಿ, ಪಕ್ಷದ ರಾಜ್ಯಾಧ್ಯಕ್ಷ  ಸಿಎಂ ಇಬ್ರಾಹಿಂ ನೇತ್ರತ್ವದಲ್ಲಿ ಜೆಡಿಎಸ್ ಗೆ ಸೇರ್ಪಡೆಯಾಗಿದ್ದಾರೆ.
 
ಈ ವೇಳೆ ಮಾತನಾಡಿದ ಮಾಜಿ ಪ್ರಧಾನಿ ದೇವೇಗೌಡರು ಚಾಮರಾಜಪೇಟೆ ವಿಧಾನಸಭೆ ಕ್ಷೇತ್ರದಿಂದ ಹಲವರು ಸೇರ್ಪಡೆ ಯಾಗ್ತಿದ್ದಾರೆ .ಕಾಂಗ್ರೆಸ್ ದಿಂದ ಜೆಡಿಎಸ್ ಗೆ ಹಲವರು ಸೇರ್ಪಡೆ ಯಾಗ್ತಿರೋದ್ರಿಂದ  ನನ್ನಗೆ ಸಂತೋಷವಾಗ್ತೀದೆ .ನಾವು ಮುಂದೆ ಕಾಲು ಇಡುವಾಗ ರಾಷ್ಟ್ರದಲ್ಲಿ ಏನು ನಡಿತಿದೆ ಅಂತಾ ತಿಳಿದುಕೊಳ್ಳಬೇಕು ಈಗ ಕಾಲ ಕೂಡಿ ಬಂದಿದೆ. ನಾವು ಅಧಿಕಾರಕ್ಕೆ ಬರುವುದು ಪಕ್ಷಕ್ಕೆ ಮಾತ್ರ ಸೇವೆ ಅಲ್ಲ ರಾಷ್ಟ್ರ ರಾಜ್ಯಕ್ಕೂ ಶಕ್ತಿಯನ್ನ ಮೀರಿ ನಾವು ಕೆಲಸ ಮಾಡ್ತೇವಿ ಎಂದು ಮಾಜಿ ಪ್ರಧಾನಿ ದೇವೇಗೌಡರು ಹೇಳಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿಗಾಗಿ ಕಾಲ್ನಡಿಗೆ ಜಾಥಾ..!