Webdunia - Bharat's app for daily news and videos

Install App

ಮಾಜಿ ಸಿಎಂ ಸಿದ್ದರಾಮಯ್ಯ ಬಾದಾಮಿ ಕ್ಷೇತ್ರದಿಂದಲೇ ಸ್ಪರ್ಧಿಸಬೇಕೆಂದು ಒತ್ತಾಯ

Webdunia
ಸೋಮವಾರ, 2 ಜನವರಿ 2023 (17:12 IST)
ಮಾಜಿ ಸಿಎಂ ಸಿದ್ದರಾಮಯ್ಯರವರು ಬಾದಾಮಿ ಕ್ಷೇತ್ರದಿಂದಲೇ ಸ್ಪರ್ಧಿಸಬೇಕೆಂದು ಅಭಿಮಾನಿಗಳು ಒತ್ತಾಯ ಮಾಡಿದ್ದಾರೆ. ಸಿದ್ದರಾಮಯ್ಯ ಸ್ವರ್ಧಿಸಲು ಯಾವುದೇ ಕ್ಷೇತ್ರ ಇನ್ನೂ ಫೈನಲ್​ ಆಗಿಲ್ಲ. ಅವರು ಕ್ಷೇತ್ರ ಹುಡುಕಾಟದಲ್ಲಿದ್ದಾರೆ. ಬಾದಾಮಿ ಸಿದ್ದರಾಮಯ್ಯರಿಗೆ ಓಡಾಡಲು ದೂರವಾಗಿದೆ. ಆದ್ದರಿಂದ ಅವರು ಬಾದಾಮಿಯಿಂದ ಸ್ಪರ್ಧಿಸುವುದಿಲ್ಲ ಎಂಬ ಮಾತುಗಳು ಕೇಳಿ ಬಂದಿವೆ. ಸಿದ್ದರಾಮಯ್ಯ ಬಾದಾಮಿಯಿಂದಲೇ ಸ್ಪರ್ಧಿಸಬೇಕು. ಅವರಿಗೆ ಕ್ಷೇತ್ರಕ್ಕೆ ಓಡಾಡಲು ದೂರವಾದರೆ ಅಭಿಮಾನಿಗಳೆಲ್ಲಾ ಸೇರಿ ಹೆಲಿಕಾಪ್ಟರ್ ​ಕೊಡಿಸುತ್ತೇವೆ ಎಂದು ಹೇಳಿದ್ದಾರೆ. ತಮ್ಮ ಕುರಿ ಮರಿ, ಹೊಲ ಮಾರಾಟ ಮಾಡಿ ಹೆಲಿಕಾಪ್ಟರ್ ಕೊಡಿಸಲು ಬಾದಾಮಿಯ ಅಭಿಮಾನಿಗಳು ಮುಂದಾಗಿದ್ದಾರೆ. ಬಾದಾಮಿ ಅಭಿಮಾನಿಗಳು ಸಿದ್ದು ಕುರಿತು ತಮ್ಮ ಮನದಾಳದ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ. ಬಾಗಲಕೋಟೆಯಲ್ಲಿ ಕಾಂಗ್ರೆಸ್ ಪಕ್ಷದ ಚುನಾವಣೆ ವೀಕ್ಷಕರ ಮುಂದೆ ಬಾದಾಮಿಯ ಸಿದ್ದು ಬೆಂಬಲಿಗರು ಪಟ್ಟು ಹಿಡಿದು ನಿಂತಿದ್ರು. ಬೇಕೆ ಬೇಕು ಸಿದ್ದರಾಮಯ್ಯ ಬೇಕು ಎಂಬ ಘೋಷಣೆಯೊಂದಿಗೆ ಬಾದಾಮಿ ಜನ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಬಂದಿದ್ರು. ಮತ್ತೆ ಮಾಜಿ ಸಿಎಂ ಸಿದ್ದರಾಮಯ್ಯ ಬಾದಾಮಿಯಿಂದ ಸ್ಫರ್ಧೆ ಮಾಡುವಂತೆ ಒಕ್ಕೊರಲಿನ ಆಗ್ರಹ ಮಾಡಿದ್ದಾರೆ. ಸಿದ್ದು ಬಾದಾಮಿಯಿಂದ ಗೆದ್ದು ಸಿಎಂ ಆಗಲೆಂದು ಕೆಲ ಅಭಿಮಾನಿಗಳು ಹರಕೆ ಹೊತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಭಾರತದ ಮೇಲೆ 50 ಶೇಕಡಾ ಸುಂಕದ ಬರೆ ಹಾಕಿದ ಡೊನಾಲ್ಡ್ ಟ್ರಂಪ್

ಭುವನೇಶ್ವರ: ಸ್ನೇಹಿತನಿಂದ ಬ್ಲ್ಯಾಕ್‌ಮೇಲ್‌: ಹೆದರಿ ಪೆಟ್ರೋಲ್ ಹಚ್ಚಿ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ

ಹೆಲ್ಮೆಟ್ ಇಲ್ಲದೆ, ಪೆಟ್ರೋಲ್ ಇಲ್ಲ: ಪೆಟ್ರೋಲ್ ಹಾಕಿಸಿಕೊಳ್ಳಲು ಬೈಕ್ ಸವಾರ ಮಾಡಿದ ಕಸರತ್ತು ವೈರಲ್

ವಿಕ್ಟೋರಿಯಾ ಆಸ್ಪತ್ರೆಗೆ ಸಿಎಂ ಸಿದ್ದರಾಮಯ್ಯ ದಿಡೀರ್ ಭೇಟಿ ಹಿಂದಿನ ಕಾರಣ ಇಲ್ಲಿದೆ

ಧರ್ಮಸ್ಥಳ: ನಿರ್ಣಾಯಕ ಘಟಕ್ಕೆ ತಲುಪುತ್ತಿರುವಾಗಲೇ ಮತ್ತೊಬ್ಬ ಅಪರಿಚಿತ ಎಂಟ್ರಿ

ಮುಂದಿನ ಸುದ್ದಿ
Show comments