Select Your Language

Notifications

webdunia
webdunia
webdunia
webdunia

ರಾಹುಲ್‌ ಗಾಂಧಿಗೆ ದಲಿತ ಹೆಣ್ಣು ಕೊಡಿಸಲು ನಾವು ಸಿದ್ದ: ಕಾರಜೋಳ

ರಾಹುಲ್‌ ಗಾಂಧಿಗೆ ದಲಿತ ಹೆಣ್ಣು ಕೊಡಿಸಲು ನಾವು ಸಿದ್ದ: ಕಾರಜೋಳ
ಬೆಂಗಳೂರು , ಮಂಗಳವಾರ, 29 ಆಗಸ್ಟ್ 2017 (13:39 IST)
ರಾಹುಲ್‌ ಗಾಂಧಿಗೆ ದಲಿತ ಹೆಣ್ಣು ಕೊಡಿಸಲು ನಾವು ಸಿದ್ದ. ಕರ್ನಾಟಕದಿಂದ ದಲಿತ ಹೆಣ್ಣು ಮಗಳನ್ನು ಕೊಡಲು ಸಿದ್ದರಿದ್ದೇವೆ ಎಂದು ಬಿಜೆಪಿ ಮುಖಂಡ ಗೋವಿಂದ ಕಾರಜೋಳ ವಾಗ್ದಾಳಿ ನಡೆಸಿದ್ದಾರೆ.
ಸ್ಲಂಮೋರ್ಚಾ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ, ತಮ್ಮ ಪುತ್ರ ರಾಹುಲ್ ಗಾಂಧಿಗೆ ವಿವಾಹ ಮಾಡಲು ಬಯಸಿದಲ್ಲಿ ಕರ್ನಾಟಕದ ದಲಿತ ಹೆಣ್ಣು ಮಗಳು ಸಿದ್ದಳಿದ್ದಾಳೆ ಎಂದು ತಿರುಗೇಟು ನೀಡಿದರು.
 
ಸಿಎಂ ಸಿದ್ದರಾಮಯ್ಯ ದಲಿತ ಹೆಣ್ಣು ಮಕ್ಕಳನ್ನು ವಿವಾಹವಾಗಿ ನಿಮ್ಮ ಮನೆಗೆ ಕರೆ ತನ್ನಿ ಎಂದು ಬಿಜೆಪಿ ಮುಖಂಡರಿಗೆ ಸಲಹೆ ನೀಡುತ್ತಿದ್ದಾರೆ. ಆದ್ದರಿಂದ, ರಾಹುಲ್ ಗಾಂಧಿಗೆ ದಲಿತ ಹೆಣ್ಣುಮಗಳನ್ನು ಕೊಟ್ಟು ವಿವಾಹ ಮಾಡಲು ಸಿದ್ದವಾಗಿದ್ದೇವೆ ಎಂದು ತಿಳಿಸಿದ್ದಾರೆ.
 
ಬಿಜೆಪಿ ನಾಯಕರು ದಲಿತರ ಮನೆಗೆ ಊಟಕ್ಕೆ ಹೋಗುವುದರ ಬದಲಿಗೆ ಅವರ ಹೆಣ್ಣು ಮಕ್ಕಳನ್ನು ತಮ್ಮ ಮನೆಗೆ ತಂದುಕೊಳ್ಳಲಿ ಎಂದು ಸಿಎಂ ಸಿದ್ದರಾಮಯ್ಯ ನೀಡಿದ ಹೇಳಿಕೆಗೆ ಬಿಜೆಪಿ ಮುಖಂಡ ಗೋವಿಂದ ಕಾರಜೋಳ ತಿರುಗೇಟು ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಡಾ.ಯತೀಂದ್ರ, ಸುನೀಲ್‌ಭೋಸ್‌ಗೆ ಟಿಕೆಟ್: ಪ್ರತ್ರಿಕ್ರಿಯೆಗೆ ಸಿಎಂ ನಕಾರ