Publish Date: Mon, 28 Aug 2017 (20:47 IST)
Updated Date: Mon, 28 Aug 2017 (20:48 IST)
ಹಿರಿಯ ಸಂಶೋಧಕ ಎಂ.ಎಂ.ಕಲಬುರಗಿ ಕಗ್ಗೊಲೆ ಪ್ರಕರಣವನ್ನು ಶೀಘ್ರವೇ ಭೇಧಿಸುವ ವಿಶ್ವಾಸವಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಎಂ.ಎಂ.ಕಲಬುರಗಿ ಕೇಸ್ ಅಂತಿಮ ಘಟ್ಟಕ್ಕೆ ತಲುಪಿದ್ದು, ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.
ಕ್ಷಿಪ್ರಗತಿಯಲ್ಲಿ ಪ್ರಕರಣದ ತನಿಖೆ ನಡೆಸುವಂತೆ ಸಿಐಡಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದೇನೆ ಎಂದು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
2015 ಆಗಸ್ಟ್ 30 ರಂದು ಗುಂಡಿಟ್ಟು ಬರ್ಬರವಾಗಿ ದುಷ್ಕರ್ಮಿಗಳ ತಂಡ ಹತ್ಯೆಗೈದು ಪರಾರಿಯಾಗಿತ್ತು. ಕಲಬುರಗಿಯವರ ಹತ್ಯೆ ರಾಜ್ಯದಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.