Publish Date: Fri, 28 Jan 2022 (15:59 IST)
Updated Date: Fri, 28 Jan 2022 (20:01 IST)
ಬೆಂಗಳೂರು : ದೊಡ್ಡ ಪರಿವಾರ ಸೇರಿದ್ದು ನನ್ನ ಪುಣ್ಯವೆಂದು ಭಾವಿಸ್ತೇನೆ. ಪ್ರಜಾಪ್ರಭುತ್ವದ ಯಶಸ್ವಿಗೆ ಇಂತಹ ಭಾವನೆಯೇ ಕಾರಣ.
ಈ ಸಂಬಂಧ ಇರದೇ ಯಾವ ಸಾಧನೆ ಮಾಡಲೂ ಆಗಲ್ಲ. ಬೇರೆ ಪಕ್ಷದಲ್ಲಿ ಬರೀ ವ್ಯವಹಾರಿಕ ಮಾತ್ರ ಇರುತ್ತದೆ. ಸೇವಾ ಮನೋಭಾವನೆ ಇರುವವರೆಲ್ಲ ಬಿಜೆಪಿ ಕಟ್ಟಿದ್ದಾರೆ ಎಂದು ಬಿಜೆಪಿ ಕಚೇರಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.
ರಾಜ್ಯದ ಸಿಎಂ ಆಗಿ ನನ್ನ ಮೇಲೆ ಗುರುತರ ಜವಾಬ್ದಾರಿ ಇದೆ. ನಮ್ಮ ಸಂಸ್ಕೃತಿ ಉಳಿಸಿಕೊಂಡು, ನಾಡು, ದೇಶ ಕಟ್ಟಬೇಕಿದೆ ಎಂದು ಅಭಿನಂದನಾ ಸಮಾರಂಭದಲ್ಲಿ ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರು ಸಮಗ್ರ ಅಭಿವೃದ್ಧಿಗೆ 6 ಸಾವಿರ ಕೋಟಿ ಅಲ್ಲದೇ, 13 ಸಾವಿರ ಕೋಟಿ ಕೊಡಲಾಗಿದ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.