Select Your Language

Notifications

webdunia
webdunia
webdunia
webdunia

ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ -ಶಾಸಕ ಬೆಳ್ಳಿಪ್ರಕಾಶ್

Cm
ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ ಎಂದು ಕಡೂರು ಶಾಸಕ ಬೆಳ್ಳಿ ಪ್ರಕಾಶ್ ಹೇಳಿಕೆ ನೀಡಿದ್ದಾರೆ. ಗೃಹ ಕಛೇರಿ ಕೃಷ್ಣಾದಲ್ಲಿ ಸಿಎಂ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ.
ನಮ್ಮ ಜಿಲ್ಲೆಯಲ್ಲಿ ನನಗಿಂತಲೂ ಹಿರಿಯರಿದ್ದಾರೆ, ಮೂಡಿಗೆರೆ ಎಂ ಪಿ ಕುಮಾರಸ್ವಾಮಿ, ತರೀಕೆರೆ ಸುರೇಶ್ ಇದಾರೆ, ಅವರಿಗೆ ಕೊಡಲಿ. ಸಿ.ಟಿ ರವಿ ಮಾರ್ಗದರ್ಶನದಲ್ಲಿ ಮುಂದೆ‌ ಹೋಗುತ್ತೇವೆ. ಸಂಪುಟ ವಿಸ್ತರಣೆ ಸಮಯದಲ್ಲಿ ನಮ್ಮ ಜಿಲ್ಲೆಗೆ ಸ್ಥಾನ ಸಿಗಬಹುದು,
 
ಸಿಗದೆಯೂ ಇರಬಹುದು. ಯಾರಿಗೆ ಕೊಟ್ಟರು ಸಂತೋಷ, ಕೊಟ್ಟಿಲ್ಲವಾದರೂ ಸಂತೋಷ ಎಂದು ಹೇಳಿದರು. ಇನ್ನೂ ಬಿಜೆಪಿ ಶಾಸಕರು ಕಾಂಗ್ರೆಸ್ ಗೆ ಹೋಗಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ಪಕ್ಷದಿಂದ ಯಾರು ಹೋಗುವುದಿಲ್ಲ. ಚುನಾವಣಾ ಹತ್ತಿರ ಬಂ ದಾಗ ಏನೆಲ್ಲಾ ಆಗುತ್ತದೆಂದು ದೇವರೊಬ್ಬರಿಗೆ ಮಾತ್ರ ಗೊತ್ತು. ಒಮ್ಮೆ ಪಕ್ಷಕ್ಕೆ ಸೇರ್ಪಡೆಯಾದರೆ ಅಲ್ಲಿ ವಲಸಿಗ ಮೂಲ ಎನ್ನುವು ದಿಲ್ಲ. ಈಶ್ವರಪ್ಪ ಉಸ್ತುವಾರಿಯಾಗಿ ಬಂದಿರುವುದನ್ನು ನಾವು ಸ್ವಾಗತ ಮಾಡುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರವಿ ಡಿ.ಚನ್ನಣ್ಣನವರ್ ವರ್ಗಾವಣೆ ಮಾಡಿ ಆದೇಶ