Select Your Language

Notifications

webdunia
webdunia
webdunia
webdunia

ವರಿಷ್ಠರು ಹೇಳಿದಂತೆ ಕೇಳ್ತೇವೆ- ಶಾಸಕ ಮಹೇಶ್ ಕುಮಟಳ್ಳಿ

We listen as elders say
ಬೆಳಗಾವಿ , ಗುರುವಾರ, 29 ಡಿಸೆಂಬರ್ 2022 (19:40 IST)
ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಚಾರ ಕುರಿತು ಬೆಳಗಾವಿಯ ಸುವರ್ಣಸೌಧದಲ್ಲಿ ಶಾಸಕ ಮಹೇಶ್ ಕುಮಟಳ್ಳಿ ಮಾತನಾಡಿದ್ದಾರೆ. ರಮೇಶ್ ಜಾರಕಿಹೊಳಿ ಅಧಿಕಾರಕ್ಕಾಗಿ ಬಂದಿಲ್ಲ. ಸಚಿವ ಸ್ಥಾನ ಕೊಡ್ತಾರೆಂಬ ಭರವಸೆ ಕೊಟ್ಟಿದ್ದಾರೆ.
ನಾನು ಸೈಲೆಂಟಾಗಿಲ್ಲ, ಕ್ಷೇತ್ರದಲ್ಲಿ ಕೆಲಸ ಮಾಡ್ತಿದ್ದೇನೆ. ವರಿಷ್ಠರು ಏನು ಹೇಳ್ತಾರೆ ಅದರಂತೆ ನಡೆದುಕೊಳ್ತೇವೆ ಎಂದು ಹೇಳಿದ್ರು. ಸವದಿಗೆ ಮುಂದೆ BJPಯಿಂದ ಟಿಕೆಟ್ ಕೊಡ್ತಾರ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅವರು MLC, ನಾನು MLA ಆಗಿದ್ದೇನೆ. ಇಬ್ಬರು ಪಕ್ಷದ ಕೆಲಸ ಮಾಡ್ತಿದ್ದೇವೆ. ಟಿಕೆಟ್ ಕೊಡುವುದು ವರಿಷ್ಠರಿಗೆ ಬಿಟ್ಟಿದ್ದು. ನಮ್ಮ ವರಿಷ್ಠರು ಏನು ಹೇಳ್ತಾರೆ ಅದರಂತೆ ನಡೆದುಕೊಳ್ತೇವೆ. ಯಾವುದೇ ಅಸಮಾಧಾನ ಇಲ್ಲ ಎಂದು ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

HDKಯನ್ನು BJPಯವರು ನೆನೆಯಬೇಕು