Select Your Language

Notifications

webdunia
webdunia
webdunia
Tuesday, 1 April 2025
webdunia

100 ದಿನಗಳಲ್ಲಿ ಪಕ್ಷ ಸಂಘಟನೆ ಮಾಡುವ ಯೋಜನೆ ಹಮ್ಮಿಕೊಂಡಿದ್ದೇವೆ- ಸಲೀಂ ಅಹ್ಮದ್

We have planned to organize the party in 100 days
bangalore , ಮಂಗಳವಾರ, 13 ಡಿಸೆಂಬರ್ 2022 (21:03 IST)
ವಿಧಾನಸಭೆ ಚುನಾವಣೆಗೆ ರಣತಂತ್ರ ರೂಪಿಸಲು ಕಾಂಗ್ರೆಸ್ ಅಲ್ಪಸಂಖ್ಯಾತ ಹಾಲಿ ಹಾಗೂ ಮಾಜಿ ಶಾಸಕರ, ಎಂಎಲ್‌ಸಿಗಳ ಸಭೆ ಇಂದು ನಗರದ ಸಾಲಾರ್ ಭವನದಲ್ಲಿ ನಡೆಯಿತು, ಸಭೆಯ ಬಳಿಕ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಇವತ್ತು ಕಾಂಗ್ರೆಸ್ ಅಲ್ಪಸಂಖ್ಯಾತ ಮುಖಂಡರ ಸಭೆ ನಡೆಸಲಾಗಿದೆ.55 ಮುಖಂಡರು ಭಾಗಿಯಾಗಿದ್ರು,ಮುಸ್ಲಿಂ ಓಟ್ ಡಿಲೀಟ್ ಮಾಡುವ ಮೂಲಕ ಷಡ್ಯಂತ್ರ ಮಾಡಲಾಗಿದೆ.ಅಲ್ಪಸಂಖ್ಯಾತರ ಓಟ್ ಡಿಲೀಟ್ ಮಾಡುವ ಹುನ್ನಾರ ಬಿಜೆಪಿ ನಡೆಸುತ್ತಿದೆ.ಇದನ್ನು ತಡೆಯುವ ಬಗೆಯ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ.ಜನವರಿ ತಿಂಗಳಲ್ಲಿ ಐದು ವಿಭಾಗೀಯ ಸಮಾವೇಶ ಮಾಡುವ ಬಗ್ಗೆ ಚರ್ಚಿಸಿದ್ಧೇವೆ.  ಚುನಾವಣೆಯಲ್ಲಿ ಹೆಚ್ಚು‌ ಟಿಕೆಟ್ ಕೊಡಬೇಕು ಎಂಬ ಬಗ್ಗೆಯೂ ಬೇಡಿಕೆಯಿದೆ.ಟಿಕೆಟ್ ಗಾಗಿ ಮುಸ್ಲಿಂ ಆಕಾಂಕ್ಷಿಗಳಿಂದ 100 ಅರ್ಜಿಗಳು ಬಂದಿವೆ. ಈ ಅರ್ಜಿ ಪರಿಶೀಲನೆ ಮಾಡಿ ಹೈಕಮಾಂಡ್ ಗೆ ನೀಡುತ್ತೇವೆ. ಎಂದು ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಬೋರ್ಡ್ ಎಕ್ಸಾಮ್ ರದ್ದುಗೊಳಿಸಲು ಸಿಎಂ ಶ್ರೀ ಬಸವರಾಜ ಬೊಮ್ಮಾಯಿಗೆ ಪತ್ರ