Select Your Language

Notifications

webdunia
webdunia
webdunia
Tuesday, 8 April 2025
webdunia

ನಾವೇನು ಪುಕ್ಕಟ್ಟೆ ಅಕ್ಕಿ ಕೊಡಿ ಅಂತ ಕೇಳಲ್ಲ

We did not ask you to give us pukkatte rice
bangalore , ಗುರುವಾರ, 15 ಜೂನ್ 2023 (20:40 IST)
ಅನ್ನಭಾಗ್ಯಕ್ಕೆ ಅಕ್ಕಿ ನೀಡಲು ಕೇಂದ್ರ ಸರ್ಕಾರ ನಿರಾಕರಿಸಿರುವುದನ್ನು ಸಚಿವ ಪ್ರಿಯಾಂಕ್​ ಖರ್ಗೆ ಖಂಡಿಸಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಅವರು, ದುರುದ್ದೇಶದಿಂದ ಕೇಂದ್ರ ಸರ್ಕಾರ ಈ ರೀತಿ ಮಾಡಿದೆ. ಮೊದಲು ಆಹಾರ ಧಾನ್ಯ ಖರೀದಿ ಮಾಡಲು FCIಗೆ ಹೋಗಬೇಕು. ನಾವೇನು ಪುಕ್ಕಟ್ಟೆ ಅಕ್ಕಿ ಕೊಡಿ ಅಂತ ಕೇಳಲ್ಲ. ನಾವೇ ದುಡ್ಡು ಕೊಡುತ್ತೀವಿ ಅಕ್ಕಿ ಕೊಡಿ ಎಂದ್ರು ಕೊಡಲ್ಲ ಅಂತ ಹೇಳ್ತಿದ್ದಾರೆ. ಯಾಕೆ ಕೊಡಲ್ಲ ಅಂತ ಕೇಂದ್ರ ಸರ್ಕಾರ ಹೇಳಬೇಕು ಎಂದು ಕಿಡಿಕಾರಿದ್ರು. ದುಡಿಯುವ ಕೈಯನ್ನು ಚೆನ್ನಾಗಿ ನೋಡ್ಕೋತ್ತೀವಿ ಅಂದ್ರೆ ಯಾಕೆ ಅಡ್ಡಗಾಲು ಹಾಕ್ತಿದ್ದಾರೆ. ಇದನ್ನು ನೋಡಿಕೊಂಡು ನಾವು ಸುಮ್ಮನೆ ಕುಳಿತಿಕೊಳ್ಳಲ್ಲ. ಬೇರೆ ರಾಜ್ಯದಿಂದ ಖಾಸಗಿ ಆಗಿ ಆಹಾರ ಧಾನ್ಯಗಳನ್ನು ತೆಗೆದುಕೊಂಡು ಬರ್ತಿವಿ. ನಮಗೆ ಯಾಕೆ ಕೇಂದ್ರ ಸರ್ಕಾರ ಅಕ್ಕಿ ಕೊಡಲು ತಯಾರಿಲ್ಲ ಎಂದು ರಾಜ್ಯ ಬಿಜೆಪಿ ನಾಯಕರು ಉತ್ತರ ಕೊಡಲಿ ಎಂದು ಹೇಳಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಮೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಲು ಬಿಜೆಪಿ ಯತ್ನ