Select Your Language

Notifications

webdunia
webdunia
webdunia
webdunia

ರಾಜ್ಯದ ವಿರುದ್ಧ ತೀರ್ಪು ಬಂದ್ರೆ ಆಣೆಕಟ್ಟು ಕಟ್ಟೋಕ್ಕಾಗುತ್ತಾ: ಸಚಿವ ಕಾಗೋಡು

ಮಹದಾಯಿ ನ್ಯಾಯಾಧೀಕರಣ
ಬೆಂಗಳೂರು , ಮಂಗಳವಾರ, 2 ಆಗಸ್ಟ್ 2016 (16:51 IST)
ಮಹದಾಯಿ ನ್ಯಾಯಾಧೀಕರಣದಿಂದ ರಾಜ್ಯದ ವಿರುದ್ಧ ತೀರ್ಪು ಬಂದರೆ ಏನು ಮಾಡಕ್ಕೆ ಆಗತ್ತೇ ನೀವೆ ಹೇಳಿ? ನಾವೇನು ಆಣೆಕಟ್ಟು ಕಟ್ಟೋಕ್ಕಾಗುತ್ತಾ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ.
 
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹದಾಯಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯದ ವಿರುದ್ಧ ತೀರ್ಪು ಬಂದರೆ ಏನು ಮಾಡಲು ಸಾಧ್ಯ? ನಾವೇ ಕಾನೂನನ್ನು ಬದಲಾಯಿಸಲಾಗುತ್ತಾ? ಅಥವಾ ನಾವೇನು ಆಣೆಕಟ್ಟು ಕಟ್ಟೋಕ್ಕೆ ಸಾಧ್ಯವಾ ಎಂದು ಪ್ರಶ್ನಿಸಿದರು.
 
ಮಹದಾಯಿ ವಿವಾದಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಸ್ಥಿಕೆ ವಹಿಸಬೇಕು. ಕೂಡಲೇ ಮೂರು ರಾಜ್ಯಗಳ ಮುಖ್ಯಮಂತ್ರಿಯನ್ನು ಕರೆದು ಚರ್ಚೆ ನಡೆಸುವ ಮೂಲಕ ಸಮಸ್ಯೆಯನ್ನು ಇತ್ಯರ್ಥಗೊಳಿಸಬೇಕು ಎಂದು ತಿಳಿಸಿದರು.
 
ಹೈದ್ರಾಬಾದ್ ಕರ್ನಾಟಕದ 6 ಜಿಲ್ಲೆಗಳಿಗೆ ಭೇಟಿ ನೀಡಿದ್ದೇನೆ. ಆ ಪ್ರದೇಶಗಳಲ್ಲಿ ವಾಡಿಕೆಯಂತೆ ಹೆಚ್ಚು ಮಳೆಯಾಗಿದೆ. ಆದರೆ, ರಾಜ್ಯದ ಇತರೆ ಭಾಗಗಳಲ್ಲಿ ಮಳೆಯ ಕೊರತೆ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಮೋಡ ಬಿತ್ತನೆಗೆ ಸರಕಾರ ಚಿಂತಿಸುತ್ತಿದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ನಕಲಿ ಪದವಿ ಆರೋಪ ತಳ್ಳಿ ಹಾಕಿದ ಆಪ್ ಶಾಸಕ