Select Your Language

Notifications

webdunia
webdunia
webdunia
webdunia

ನಮ್ಮಗೂ ಬೆದರಿಕೆ ಇ-ಮೇಲ್ ಬಂದಿದೆ-ಪರಮೇಶ್ವರ್

ಪರಮೇಶ್ವರ್

geetha

bangalore , ಬುಧವಾರ, 6 ಮಾರ್ಚ್ 2024 (20:14 IST)
ಬೆಂಗಳೂರು-ಬೆಂಗಳೂರಿನಲ್ಲಿ  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೂ ಕೂಡ ಇ-ಮೇಲ್ ನಲ್ಲಿ ಬೆದರಿಕೆ ಸಂದೇಶ ಬಂದಿದೆ. ಈ ಹಿಂದೆ ಬೆಂಗಳೂರಿನ ಹಲವು ಶಾಲೆಗಳಿಗೆ ಬೆದರಿಕೆ ಮೇಲೆ ಸಂದೇಶ ಬಂದಿತ್ತು. ಇಂತಹ ಕೇಸ್ ಗಳನ್ನು ಭೇದಿಸುವುದಕ್ಕೆ ಸ್ವಲ್ಪ ಕಷ್ಟ ಆಗುತ್ತದೆ ಎಂದರು. ಬೇರೆ ದೇಶದ ಏಜೆನ್ಸಿಗಳು ಸಪೋರ್ಟ್ ಮಾಡುತ್ತಿಲ್ಲ. ಫೇಸ್ಬುಕ್, ಗೂಗಲ್ ಅಂತ ಕಂಪನಿಗಳು ಸಹಕರಿಸುವುದಿಲ್ಲ. ಅಂತಹ ಕಂಪನಿ ಸಹಕರಿಸಿದರೆ ಸುಲಭವಾಗಿ ಕೇಸ್ ಅನ್ನು ಭೇದಿಸಬಹುದು ಎಂದು ಹೇಳಿದ್ದಾರೆ.

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಕಡಿಮೆ ತೀವ್ರತೆಯ ಸ್ಫೋಟಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಈಗ ಮಹತ್ವದ ಸುಳಿವು ಸಿಕ್ಕಿದ್ದು, ಶೀಘ್ರದಲ್ಲೇ ಪ್ರಕರಣವನ್ನು ಭೇದಿಸುತ್ತಿದ್ದಾರೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ಅವರು ಬುಧವಾರ ಹೇಳಿದ್ದಾರೆ.ಕಳೆದ ಎರಡು ದಿನಗಳಲ್ಲಿ ಪೊಲೀಸರಿಗೆ ಕೆಲವು ಮಹತ್ವದ ಸುಳಿವು ಸಿಕ್ಕಿದ್ದು, ಅವು ಪ್ರಕರಣ ಭೇದಿಸುವ ಭರವಸೆ ಮೂಡಿಸಿವೆ ಎಂದು ಪರಮೇಶ್ವರ್ ಅವರು ಇಂದು ನಗರದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
 
ನಮ್ಮ ಅಧಿಕಾರಿಗಳು ಶೀಘ್ರದಲ್ಲೇ ಪ್ರಕರಣ ಭೇದಿಸುತ್ತಾರೆ. ನಿನ್ನೆ ಮತ್ತು ಹಿಂದಿನ ದಿನ ಕೆಲವು ಪ್ರಮುಖ ಮಾಹಿತಿಗಳನ್ನು ಸ್ವೀಕರಿಸಲಾಗಿದೆ. ಅದನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಇದೇ ರೀತಿ ಮುಂದುವರಿದರೆ ತನಿಖೆ ಪೂರ್ಣಗೊಳಿಸುತ್ತೇವೆ ಎಂದು ಪರಮೇಶ್ವರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಉತ್ತಮ ರಾಜಕಾರಣಿಯಾಗಲು ತರಬೇತಿ ಶಿಬಿರ ಆಯೋಜನೆ