Publish Date: Tue, 05 Mar 2024 (15:00 IST)
Updated Date: Tue, 05 Mar 2024 (15:45 IST)
ಬೆಂಗಳೂರು : ಬಿಜೆಪಿಯವರು ಹೇಳಿದಂತೆ ಎಲ್ಲವನ್ನೂ ಮಾಡಲಿಕ್ಕೆ ಸಾಧ್ಯವಿಲ್ಲ. ನಮಗೆ ಕಾನೂನಿದೆ. ಈ ನೆಲದ ಕಾನೂನಿಗೆ ತಕ್ಕಂತೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ನುಡಿದ ಜಿ. ಪರಮೇಶ್ವರ್, ಎಫ್‌ಎಸ್‌ಎಲ್ ರಿಪೋರ್ಟ್ ನ್ನು ಉದ್ದೇಶಪೂರ್ವಕವಾಗಿಯೇ ನಾವು ಬಹಿರಂಗಪಡಿಸಿಲ್ಲ. ಇನ್ನೂ ಹಲವು ತನಿಖಾ ವರದಿಗಳು ಬರಬೇಕಿದೆ. ಬಂದ ನಂತರ ಅವುಗಳ ಪ್ರಕಾರ ತನಿಖೆ ಮುಂದುವರೆಯಲಿದೆ ಎಂದು ಜಿ. ಪರಮೇಶ್ವರ್ ಹೇಳಿದರು.
ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಆರೋಪಿಗಳು ಕಾಂಗ್ರೆಸ್ ಕಾರ್ಯಕರ್ತರೋ, ಕಾಂಗ್ರೆಸ್ ಮೇಲೆ ಅನುಕಂಪ ಹೊಂದಿರುವವರೋ ಅಥವಾ ಕಾಂಗ್ರೆಸ್ ಕಚೇರಿ ಕೆಲಸಗಾರರೋ ನನಗೆ ಗೊತ್ತಿಲ್ಲ ಎಂದು ಗೃಹಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಅವರಿಂದಲೇ ಸತ್ಯ ಹೊರಬರಲಿದೆ ಎಂದರು.
ರಾಮೇಶ್ವರಂ ಸ್ಫೋಟ ಪ್ರಕರಣದಲ್ಲಿ ಎನ್‌ಐಎ ಇಂದಿನಿಂದ ತನಿಖೆ ಪ್ರಾರಂಭಿಸಿದೆ. ಇದು ರಾಷ್ಟ್ರೀಯ ಸುರಕ್ಷತೆಯ ವಿಷಯವಾದ್ದರಿಂದ ತನಿಖೆಯನ್ನು ಎನ್‌ಐಎ ನಡೆಸುತ್ತಿದೆ ಎಂದು ಜಿ. ಪರಮೇಶ್ವರ್ ಹೇಳಿದರು.