Publish Date: Wed, 08 Mar 2023 (15:48 IST)
Updated Date: Wed, 08 Mar 2023 (15:56 IST)
ಬೆಂಗಳೂರಿನ ಹೃದಯ ಭಾಗದಲ್ಲಿರುವ ಮೆಜಸ್ಟಿಕ್ ರಸ್ತೆ ಗಬ್ಬು ನರುತ್ತಿದೆ.ಮೆಜಸ್ಟಿಕ್ ಬಿ ಎಂ ಟಿ ಸಿ ನಿರ್ಮಲ ನಿಲ್ದಾಣದ ಬಳಿ ಇರುವ ರಸ್ತೆ ಗಬದಬುನಾರುತ್ತಿದ್ದು,ಈ ಬಗ್ಗೆ ಯಾವುದೇ ಅಧಿಕಾರಿಗಳು ಕ್ರಮ ಕೈಕೊಂಡಿಲ್ಲ.ಒಂದು ವಾರದಿಂದ ಒಳಚರಂಡಿ ನೀರು ರಸ್ತೆಗೆ ಬರ್ತಿದೆ.ಒಂದು ವಾರದಿಂದ ಸ್ವಲ್ಪ ಸ್ವಲ್ಪವೇ ರಸ್ತೆಗೆ ನೀರು ಬರುತಿದ್ದು,ಇಂದು ನೀರು ರಸ್ತೆಯಲ್ಲೇ ಸಂಗ್ರಹಗೊಂಡು ವಾಸನೆ ಬರುತ್ತಿದೆ .ಹೀಗಾಗಿ ಸಾರ್ವಜನಿಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದಾರೆ.
ಅಧಿಕಾರಿಗಳು ಇದನ್ನು ಗಮನಿಸಿದರು ಯಾವುದೇ ಕ್ರಮ ಕೈಗೊಳ್ತಿಲ್ಲ.ಮೂಗು ಮುಚ್ಚಿ ಸಂಚರಿಸುವ ಪರಿಸ್ಥಿತಿ ಎದುರಾಗಿದೆ ಎಂದು ಸಾರ್ವಜನಿಕರು ಕಿಡಿಕಾರುತ್ತಿದ್ದಾರೆ.