Select Your Language

Notifications

webdunia
webdunia
webdunia
webdunia

ವಕ್ಫ್‌ ವಿವಾದ: ಜಮೀರ್‌ ಪರ ಹೋಗುವ ಸಿದ್ದರಾಮಯ್ಯಗೆ ಈಶ್ವರಪ್ಪ ಎಚ್ಚರಿಕೆ

Waqf Property Controversy, KS Eshwarappa, Chief Minister Siddaramaiah

Sampriya

ಶಿವಮೊಗ್ಗ , ಸೋಮವಾರ, 4 ನವೆಂಬರ್ 2024 (18:04 IST)
ಶಿವಮೊಗ್ಗ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಿಂದೂಗಳು, ರೈತರು ಹಾಗೂ ಈ ನಾಡಿನ ಮಣ್ಣಿನ ಮೇಲೆ ಗೌರವ ಇದ್ದಲ್ಲಿ ಕೂಡಲೇ ವಕ್ಫ್  ಹೆಸರು ಬಂದಿರುವ ಪಹಣಿಯನ್ನು ರದ್ದು ಮಾಡಬೇಕು ಎಂದು ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಆಗ್ರಹ ಮಾಡಿದರು.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಕ್ಫ್ ಆಸ್ತಿ ವಿಚಾರದಲ್ಲಿ ಮುಸ್ಲಿಮರ ಧೋರಣೆಯಿಂದ ಅವರ ಸಮಾಜ ಅಧೋಗತಿಗೆ ಹೋಗಲಿದೆ. ಈ ಬೆಳವಣಿಗೆ ಇತರೆ ರಾಜ್ಯದಲ್ಲೂ ಆಗುತ್ತಿದ್ದು, ಕೇಡುಗಾಲ ಬಂದಿದೆ ಎಂದರು.

ಹಿಂದೂ ಸಮಾಜಕ್ಕೆ ದ್ರೋಹ ಬಗೆಯುತ್ತಿದ್ದು,  ವಕ್ಫ್ ಆಸ್ತಿ ವಿವಾದದಿಂದ ಮಠ ಮಂದಿರಗಳಿಗೆ, ರೈತರಿಗೆ, ದಲಿತರಿಗೆ ಅನ್ಯಾಯ ಆಗಿದೆ ಎಂದು ಕಿಡಿಕಾರಿದ್ದಾರೆ.

ಮೊದಲ ಬಾರಿ ಸಾಧು ಸಂತರು ಹಿಂದೂಗಳ ಆಸ್ತಿ ಉಳಿವಿನ ಬಗ್ಗೆ ಮಾತನಾಡುತ್ತಿದ್ದಾರೆ. ಈ ಬಗ್ಗೆ ಸಾಧು ಸಂತರು ಜಾಗೃತರಾಗಿರುವುದು ಸಂತೋಷದ ವಿಷಯ. ಸಾಧು ಸಂತರ ಆಹ್ವಾನದ ಮೇರೆಗೆ ಆಸ್ತಿ ಪರಿಶೀಲನೆಗೆ ಹೋಗುತ್ತಿದ್ದೇನೆ.

1.10 ಲಕ್ಷ ಎಕರೆ ವಕ್ಪ್ ಆಸ್ತಿ ಆಗಿದೆ ಎಂದು ಜಮೀರ್ ವಿಧಾನಸೌಧದಲ್ಲಿ ಹೇಳಿದ್ದಾರೆ. ಇದರ ವಿರುದ್ಧ ಜನ ಯಾವುದೇ ಕೋರ್ಟ್‍ಗೆ ಹೋಗುವ ಹಾಗೆ ಇಲ್ಲ. ಮುಸ್ಲಿಮರು ಇಲ್ಲದ ಕಡೆ ಹಾಗೂ ಶಾಲಾ ಆಸ್ತಿಯನ್ನು ವಕ್ಫ್ ಆಸ್ತಿ ಎನ್ನುತ್ತಿದ್ದಾರೆ. ವಕ್ಫ್ ಆಸ್ತಿ ಎಂದು ಇರುವ ಪಹಣಿಯನ್ನು ತಕ್ಷಣ ರದ್ದು ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಕ್ಫ್‌ ಆಸ್ತಿ ಕಾಪಾಡುತ್ತೇವೆಂದು ಬಿಜೆಪಿ ಪ್ರಣಾಳಿಕೆಯಲ್ಲೇ ಘೋಷಿಸಿತ್ತು: ಸಿದ್ದರಾಮಯ್ಯ