Select Your Language

Notifications

webdunia
webdunia
webdunia
webdunia

ಬಿಜೆಪಿಯವರು ಸುಳ್ಳು ವರದಿ ಹರಡುತ್ತಿದ್ದಾರೆ ನಂಬಬೇಡಿ: ಸಿಎಂ ಸಿದ್ದರಾಮಯ್ಯ ಕರೆ

ಬಿಜೆಪಿಯವರು ಸುಳ್ಳು ವರದಿ ಹರಡುತ್ತಿದ್ದಾರೆ ನಂಬಬೇಡಿ: ಸಿಎಂ ಸಿದ್ದರಾಮಯ್ಯ ಕರೆ
ನಂಜನಗೂಡು , ಗುರುವಾರ, 6 ಏಪ್ರಿಲ್ 2017 (14:25 IST)
ಬಿಜೆಪಿಯವರು ಅನಗತ್ಯವಾಗಿ ಕಾಂಗ್ರೆಸ್ ಪಕ್ಷದ ವಿರುದ್ಧ ಇಲ್ಲ ಸಲ್ಲದ ವರದಿಗಳನ್ನು ಹರಡಿಸುತ್ತಿದ್ದಾರೆ. ಇಂತಹ ಪೊಳ್ಳು ವರದಿಗಳಿಗೆ ಗಮನ ಕೊಡಬೇಡಿ ಎಂದು ಸಿಎಂ ಸಿದ್ದರಾಮಯ್ಯ ಮತದಾರರಿಗೆ ಸಲಹೆ ನೀಡಿದರು. 

ಕಾಂಗ್ರೆಸ್ ಪಕ್ಷದ ಪರವಾಗಿ ಹಣ ನೀಡುತ್ತಿದ್ದಾರೆ ಎನ್ನುವುದನ್ನು ಕೇಳಿದ್ದೇವೆ. ಆದರೆ, ನಮಗೆ ಹಣ ಕೊಟ್ಟಿಲ್ಲ ಸ್ವಾಮಿ ಎಂದು ಕೆಲ ಗ್ರಾಮಸ್ಥರು ನೇರವಾಗಿ ಕೇಳಿದಾಗ ಸಿಎಂ ಸಿದ್ದರಾಮಯ್ಯ ಆಘಾತಗೊಂಡಿದ್ದಾರೆ.
 
ನೋಡಪ್ಪ ನಾನು ಯಾರಿಗೂ ದುಡ್ಡು ಕೊಟ್ಟಿಲ್ಲ. ನಿಮಗೆ ಯಾರೋ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ, ಗ್ರಾಮಸ್ಥರಿಗೆ ಮನವರಿಕೆ ಮಾಡಿಕೊಟ್ಟು ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ಮನವಿ ಮಾಡಿದರು.
 
ಸಿಎಂ ಸಿದ್ದರಾಮಯ್ಯ ಉಪಸ್ಥಿತರಿದ್ದ ಸ್ಥಳಕ್ಕೆ ಆಗಮಿಸಿದ ಗ್ರಾಮಸ್ಥರು, ಇಲ್ಲಿ ಹಣ ನೀಡುತ್ತಿದ್ದಾರೆ ಹೋಗಿ ಪಡೆದುಕೊಳ್ಳಿ ಎಂದು ಕೆಲವರು ಹೇಳಿದ್ದರಿಂದ ನಾವು ಬಂದಿದ್ದೇವೆ. ನಮಗೆ ದುಡ್ಡು ಕೊಡಿ ಸ್ವಾಮಿ ಎಂದು ಕೋರಿದರು.
    
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಸಚಿವ ರಾಮಲಿಂಗಾರೆಡ್ಡಿ ವಾಸ್ತವ್ಯದ ಕಾಟೇಜ್ ಮೇಲೆ ಚುನಾವಣಾಧಿಕಾರಿಗಳ ದಾಳಿ