Publish Date: Thu, 06 Apr 2017 (14:14 IST)
Updated Date: Thu, 06 Apr 2017 (14:16 IST)
ಉಪಚುನಾವಣೆ ಪ್ರಚಾರಕ್ಕಾಗಿ ಆಗಮಿಸಿದ ಸಚಿವ ರಾಮಲಿಂಗಾರೆಡ್ಡಿ ವಾಸ್ತವ್ಯ ಹೂಡಿದ್ದ ಕಾಟೇಜ್ ಮೇಲೆ ಚುನಾವಣಾಧಿಕಾರಿಗಳು ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಪಕ್ಷದವರು ಹಣ ಹಂಚುತ್ತಿದ್ದಾರೆ ಎನ್ನುವ ವರದಿಗಳಿಂದಾಗಿ ನಿನ್ನೆ ರಾತ್ರಿ ದಿಢೀರನೆ ಚುನಾವಣೆ ಅಧಿಕಾರಿಗಳು ಸಚಿವ ರಾಮಲಿಂಗಾರೆಡ್ಡಿ ಕಾಟೇಜ್ ಮೇಲೆ ದಾಳಿ ಮಾಡಿದಾಗ ಸಚಿವರ ಬಳಿ 8 ಸಾವಿರ ರೂಪಾಯಿಗಳು ಪತ್ತೆಯಾಗಿವೆ.
ಸಚಿವ ರಾಮಲಿಂಗಾರೆಡ್ಡಿ ವೈಯಕ್ತಿಕ ಖರ್ಚಿಗಾಗಿ 8 ಸಾವಿರ ರೂಪಾಯಿಗಳನ್ನಿಟ್ಟುಕೊಂಡಿರುವುದು ಖಚಿತವಾಗಿದ್ದರಿಂದ ಬಂದ ದಾರಿಗೆ ಸುಂಕವಿಲ್ಲ ಎನ್ನುವಂತೆ ಅಧಿಕಾರಿಗಳು ಬರಿಗೈಲಿ ವಾಪಸಾಗಿದ್ದಾರೆ.
ಕಾಂಗ್ರೆಸ್ ಮುಖಂಡರು ಮತದಾರರಿಗೆ ಹಣ, ಸೀರೆ. ಹೆಂಡ ಹಂಚುತ್ತಿದ್ದಾರೆ ಎನ್ನುವ ಬಿಜೆಪಿ ಆರೋಪಗಳಿಂದಾಗಿ ಕೇಂದ್ರ ಚುನಾವಣೆ ಆಯೋಗ ಎರಡೂ ಪಕ್ಷಗಳ ಮುಖಂಡರ ಮೇಲೆ ತೀವ್ರ ನಿಗಾವಹಿಸಿದೆ ಎಂದು ಚುನಾವಣೆ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.