Select Your Language

Notifications

webdunia
webdunia
webdunia
webdunia

ಯಡಿಯೂರಪ್ಪ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ: ಸಿಎಂ ವಾಗ್ದಾಳಿ

ಯಡಿಯೂರಪ್ಪ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ: ಸಿಎಂ ವಾಗ್ದಾಳಿ
ನಂಜನಗೂಡು , ಗುರುವಾರ, 6 ಏಪ್ರಿಲ್ 2017 (14:02 IST)
ಬರಿ ಜಂಭ, ಒಣಬುರುಡೆ ಬಿಡುವ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಅವರ ಆರೋಪಗಳಲ್ಲೂ ಸತ್ಯಾಂಶವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. 
 
ಉಪಚುನಾವಣೆ ಪ್ರಚಾರದಲ್ಲಿ ತೊಡಗಿರುವ ಸಿಎಂ ಸಿದ್ದರಾಮಯ್ಯ ಇಂದು ರೋಡ್‌ಶೋ ನಡೆಸಿದ್ದಾರೆ. ಗೂಂಡಾ ಸಂಸ್ಕ್ರತಿ ಕಾಂಗ್ರೆಸ್ ಪಕ್ಷದ್ದಲ್ಲ. ಬಿಜೆಪಿಯವರದ್ದು ಫ್ಯಾಸಿಸ್ಟ್ ಮನೋಭಾವ ಎಂದು ಟೀಕಿಸಿದರು.
 
ಉಪಚುನಾವಣೆ ಫಲಿತಾಂಶದ ನಂತರ ಮತದಾರರು ಯಾರ ಮುಖ ನೋಡಿಕೊಂಡು ಮತಹಾಕಿದ್ದಾರೆ ಎನ್ನುವುದು ತಿಳಿಯುತ್ತದೆ. ಬಿಜೆಪಿಯವರ ಬಂಡವಾಳ ಚುನಾವಣೆ ಫಲಿತಾಂಶದ ನಂತರ ಬಹಿರಂಗವಾಗುತ್ತದೆ ಎಂದು ಗುಡುಗಿದರು. 
 
ರೋಡ್‌ಶೋದಿಂದಾಗಿ ಬಿಸಿಲಿನ ಬೇಗೆಯಿಂದ ಬಳಲಿದ ಸಿದ್ದರಾಮಯ್ಯ ತಣ್ಣನೆಯ ಮಜ್ಜಿಗೆ ಕುಡಿದು ದಾಹ ತೀರಿಸಿಕೊಂಡರು.
 
ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಜಿ.ಪರಮೇಶ್ವರ್. ದೇಶಪಾಂಡೆ, ತನ್ವೀರ್ ಸೇಠ್, ನಟ ಶಶಿಕುಮಾರ್, ನಟಿ ಜಯಮಾಲಾ ಸಚಿವರಾದ ಯು.ಟಿ. ಖಾದರ್, ಉಮಾಶ್ರೀ, ರಾಮಲಿಂಗಾರೆಡ್ಡಿ, ಎಚ್‌.ಅಂಜನೇಯ ಸಂಸದ ಧೃವನಾರಾಯಣ್ ಸೇರಿದಂತೆ ಇತರ ಮುಖಂಡರು ಉಪಸ್ಥಿತರಿದ್ದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಸಿದ್ದರಾಮಯ್ಯ ಬಳಿಯೇ ಹಣದ ಪ್ರಸ್ತಾಪವಿಟ್ಟ ಗ್ರಾಮಸ್ಥರು