Select Your Language

Notifications

webdunia
webdunia
webdunia
webdunia

ಸಂಪುಟ ಸೇರಲು ಲಾಬಿ : ಈ ಬಾರಿ ಯುವಕರಿಗೆ ಮಣೆ

ಸಂಪುಟ ಸೇರಲು ಲಾಬಿ : ಈ ಬಾರಿ ಯುವಕರಿಗೆ ಮಣೆ
ಬೆಂಗಳೂರು , ಗುರುವಾರ, 29 ಜುಲೈ 2021 (09:09 IST)
ಬೆಂಗಳೂರು (ಜು.29) : ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರು ಪ್ರಮಾಣವಚನ ಸ್ವೀಕರಿಸಿದ ಬೆನ್ನಲೇ ಬಿಜೆಪಿಯಲ್ಲಿ ಸಂಪುಟ ರಚನೆಗೆ  ಭರ್ಜರಿಯಾಗಿಯೇ ಲಾಬಿ ಅರಂಭವಾಗಿದೆ. ಈ ಬಾರಿ ಹಿರಿಯರ ಬದಲು ಯುವಕರಿಗೆ ಆದ್ಯತೆ ನೀಡುವ ಸಾಧ್ಯತೆ ಇದೆ.

•ಬಿಜೆಪಿಯಲ್ಲಿ ಸಂಪುಟ ರಚನೆಗೆ  ಭರ್ಜರಿಯಾಗಿಯೇ ಲಾಬಿ ಅರಂಭವಾಗಿದೆ
•ಈ ಬಾರಿ ಹಿರಿಯರ ಬದಲು ಯುವಕರಿಗೆ ಆದ್ಯತೆ ನೀಡುವ ಸಾಧ್ಯತೆ
ವಲಸಿಗರಿಗೂ ಸೇರಿದಂತೆ ಇದುವರೆಗೆ ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿದ್ದವರಿಗೆ   ಹೊಸ ಸಂಪುಟದಲ್ಲಿ ಅವಕಾಶ ಸಿಗುವುದೋ ಇಲ್ಲವೋ ಎಂಬ ಆತಂಕ ಎದುರಾಗಿದ್ದರೆ ಈ ಬಾರಿಯಾದರೂ ತಮಗೆ ಸಚಿವ ಸ್ಥಾನ ಸಿಗಬೇಕು ಎಂಬ ಪಟ್ಟನ್ನು  ಹಿಂದಿನ ಸಂಪುಟ ವಿಸ್ತರಣೆಯಲ್ಲಿ ಅವಕಾಶ  ವಂಚಿತರಾದವರು ಬಹಿರಂಗವಾಗಿ ಪ್ರಸ್ತಾಪಿಸುತ್ತಿದ್ದಾರೆ.
ಅನೇಕ ಶಾಸಕರು ಮಂಗಳವಾರ ಮತ್ತು ಬುಧವಾರ ಎರಡು ದಿನಗಳ ಕಾಲ ರಾಜ್ಯಕ್ಕೆ ಆಗಮಿಸಿದ್ದ ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್  ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ.
ಈ ನಡುವೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮಾತನಾಡಿ, ಸಚಿವ ಸಂಪುಟ ಬಗ್ಗೆ ಮುಖ್ಯಮಂತ್ರಿಗಳು ಮತ್ತು ರಾಷ್ಟ್ರೀಯ ನಾಯಕರು ಎಲ್ಲವನ್ನೂ ನಿರ್ಧಾರ ಮಾಡುತ್ತಾರೆ. ಅತಿ ಶೀಘ್ರದಲ್ಲಿ ಸಚಿವ ಸಂಪುಟ ರಚನೆಯಾಗಲಿದೆ ಎಂದು ತಿಳಿಸಿದರು.
ಶಾಸಕ ತಿಪ್ಪಾರೆಡ್ಡಿ ಮಾತನಾಡಿ ಈ ಬಾರಿ ಸಚಿವ ಸ್ಥಾನ ಸಿಗಬಹುದು ಎನ್ನುವ ವಿಶ್ವಾಸ ಇದೆ. ಹೊಸಬರಿಗೆ ಅವಕಾಶ ಕೊಟ್ಟರೆ ಪಕ್ಷ ಬೆಳೆಯಲು ಅವಕಾಶ ಸಿಗಲಿದೆ ಎಂದು ಹೇಳಿದರು. ಬಿಸಿ ಪಾಟೀಲ್ ಸಿಎಂ ಬದಲಾಗಿದ್ದಾರೆಯೇ ಹೊರತು ಬಿಜೆಪಿ ಅಲ್ಲ. ನಾವು ಅನ್ಯ ಪಕ್ಷದಿಂದ ಬಂದಿರುವ 17 ಮಂದಿ ಖುಷಿಯಾಗಿದ್ದೇವೆ. ದೆಹಲಿ ವರಿಷ್ಠರ ಮಾರ್ಗದರ್ಶನದಲ್ಲಿ ಎಲ್ಲವೂ ಒಳ್ಳೆಯದು ಆಗಲಿದೆ ಎಂದರು. ಶಾಸಕ ಕುಮಾರ್ ಬಂಗಾರಪ್ಪ ಸಿದ್ದು ಸವದಿ ಕೂಡ ಆಕಾಂಕ್ಷಿ ಎಂದರು.


Share this Story:

Follow Webdunia kannada

ಮುಂದಿನ ಸುದ್ದಿ

ಕಾಗದ ಹರಿದು ಸ್ಪೀಕರ್ ಪೀಠದತ್ತ ಎಸೆದ ಕಾಂಗ್ರೆಸ್ ಸಂಸದರು!