Select Your Language

Notifications

webdunia
webdunia
webdunia
webdunia

ಹೊಸ ವರ್ಷಕ್ಕೆ ದೇಗುಲಗಳಿಗೆ ಭೇಟಿ

ಹೊಸ ವರ್ಷಕ್ಕೆ ದೇಗುಲಗಳಿಗೆ ಭೇಟಿ
bangalore , ಭಾನುವಾರ, 1 ಜನವರಿ 2023 (16:25 IST)
ಇಂದು ಹೊಸ ವರ್ಷದ ಮೊದಲ ದಿನ. ಕ್ಯಾಲೆಂಡರ್ ಬದಲಾಯಿಸುವ ದಿನ. ಕಳೆದು ಹೋದ ದಿನ, ಕಹಿ ನೆನಪು, ನೋವು ಎಲ್ಲವನ್ನೂ ಮರೆತು ಹೊಸ ಹರುಷದಿಂದ ಹೊಸ ವರ್ಷವನ್ನು ಬರ ಮಾಡಿಕೊಳ್ಳಲಾಗಿದೆ. ಸದ್ಯ ಬೆಂಗಳೂರಿಗರು ಹೊಸ ವರ್ಷದ ಮೊದಲ ದಿನದಂದು ದೇವಸ್ಥಾನಗಳತ್ತ ಮುಖ ಮಾಡಿದ್ದಾರೆ. ಕೈ ಮುಗಿದು ದೇವರಲ್ಲಿ ಬೇಡಿ ಹೊಸ ವರ್ಷ ಸುಖ, ಸಂತೋಷ, ನೆಮ್ಮದಿ ತೆರಳಿ ಎಂದು ಪ್ರಾರ್ಥಿಸುತ್ತಿದ್ದಾರೆ. ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ದೇವಸ್ಥಾನಗಳಿಗೆ ಜನರ ಭೇಟಿ ಹೆಚ್ಚಾಗಿದೆ. ಬೆಂಗಳೂರಿನ ಮಲ್ಲೇಶ್ವರಂನ ಕಾಡುಮಲ್ಲೇಶ್ವರ ದೇವಸ್ಥಾನದಲ್ಲಿ ಬೆಳ್ಳಗ್ಗೆ 6 ಗಂಟೆಯಿಂದಲೇ ವಿಶೇಷ ಪೂಜೆ ಆರಂಭವಾಗಿದೆ. ಗಂಗಾಭಿಷೇಕ, ಪಂಚಾಭಿಷೇಕ, ಪುಷ್ಪಾಭಿಷೇಕ ನೆರವೇರಿದ್ದು ಇದನ್ನು ಕಣ್ತುಂಬಿಕೊಂಡ ಭಕ್ತರು ಪುನೀತರಾಗಿದ್ದಾರೆ. ಶಿರಡಿ ಸಾಯಿ ಬಾಬಾ, ಗಣೇಶ ದೇವಸ್ಥಾನ, ಗವಿ ಗಂಗಾಧರ ದೇವಸ್ಥಾನ, ಬನಶಂಕರಿ ದೇವಸ್ಥಾನ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತಿವೆ. ದೇವಸ್ಥಾನಗಳಿಗೆ ಬರುವ ಭಕ್ತರಿಗೆ ಅರ್ಚಕರು ತೀರ್ಥ, ಪ್ರಸಾದ ವಿತರಿಸುತ್ತಿದ್ದಾರೆ. ಇಂದು ದೇವರಿಗೆ ವಿಶೇಷ ಅಲಂಕಾರ ಜೊತೆಗೆ ಹೋಮ ಹವನ ಮಾಡಲಾಗುತ್ತಿದೆ. ಇನ್ನು ಕಾಡುಮಲ್ಲೇಶ್ವರ ದೇವಸ್ಥಾನಕ್ಕೆ ರಾತ್ರಿ 9 ಗಂಟೆಯವರೆಗೂ ಭಕ್ತದಿಗಳಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಸಂಜೆ ಕಲ್ಯಾಣೋತ್ಸವ ನೆರವೇರಲಿದ್ದು ಕೊವಿಡ್ ರೂಲ್ಸ್ ಗಳನ್ನ ಪಾಲನೆ ಮಾಡುವಂತೆ ದೇವಸ್ಥಾನ ಆಡಳಿತ ಮಂಡಳಿ ಭಕ್ತಾದಿಗಳಿಗೆ ಸೂಚನೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

೨೦೨೩ ಕಾಂಗ್ರೆಸ್ ಅಧಿಕಾರದ ವರ್ಷವಾಗಲಿದೆ- ಡಿಕಿಶಿ