Publish Date: Sat, 08 Jul 2023 (14:58 IST)
Updated Date: Sat, 08 Jul 2023 (17:24 IST)
ಕರಾವಳಿ ಭಾಗದಲ್ಲಿ ಅತೀ ಹೆಚ್ಚು ಮಳೆ ಆಗುತ್ತಿರುವ ಬಗ್ಗೆ ಬೆಳಗಾವಿಯಲ್ಲಿ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ಕಾರವಾರದಲ್ಲಿ ಸೇತುವೆ ಬಿದ್ದಿರುವ ಮಾಹಿತಿ ಇದೆ.
ಎಲ್ಲೇಲ್ಲಿ ಅನಾಹುತ ಆಗಿದೆ ಕೂಡಲೇ ಸರಿಪಡಿಸಲು ಸೂಚಿಸಿದ್ದೇವೆ. ಮಳೆಗಾಲದಲ್ಲಿ ಆ ಭಾಗದಲ್ಲಿ ಕೆಲಸ ಮಾಡಲು ಆಗುವುದಿಲ್ಲ. ನವೆಂಬರ್ ನಂತರ ಕೆಲಸ ಮಾಡಿ ಸರಿ ಪಡಿಸುತ್ತೇವೆ ಈಗ ತಾತ್ಕಾಲಿಕವಾಗಿ ಮಾಡುತ್ತೇವೆ.
ಶಿರಾಡಿಘಾಟ್ ಸೇರಿದಂತೆ ಹಲವು ಕಡೆ ಭೂಕುಸಿತ ಆಗುತ್ತೆ ಅದಕ್ಕೆ ತಡೆಗೋಡೆ ನಿರ್ಮಿಸಲಾಗುತ್ತದೆ. ಸರ್ಕಾರಕ್ಕೆ ಚಾಲೆಂಜ್ ಆಗಿತ್ತು ಅದನ್ನ ಟೈಮ್ ಬಾಂಡ್ನಲ್ಲಿ ಮುಗಿಸಲು ಹೇಳಿದ್ದೇವೆ. ಅವಶ್ಯಕತೆ ಬಿದ್ದರೆ ಉಡುಪಿ, ಮಂಗಳೂರಿಗೆ ಭೇಟಿ ನೀಡುತ್ತೇನೆ ಎಂದರು.