Publish Date: Fri, 07 Jul 2023 (08:41 IST)
Updated Date: Fri, 07 Jul 2023 (09:48 IST)
ಕರ್ನಾಟಕದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಇಂದು ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ.
ಜುಲೈ 8 ರಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಬೆಳಗಾವಿ, ಬೀದರ್, ಹಾವೇರಿ, ಚಿತ್ರದುರ್ಗ, ದಾವಣಗೆರೆ, ಹಾಸನ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಇನ್ನುಳಿದಂತೆ ಬಹುತೇಕ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.
ಮುಲ್ಕಿ, ಕೋಟ, ಕಾರ್ಕಳ, ಉಡುಪಿ, ಮಂಕಿ, ಪಣಂಬೂರು, ಶಿರಾಲಿ, ಮಂಗಳೂರಿನಲ್ಲಿ ಅತ್ಯಧಿಕ ಮಳೆಯಾಗಿದೆ. ಕುಂದಾಪುರ, ಮಂಗಳೂರು ವಿಮಾನ ನಿಲ್ದಾಣ, ಕದ್ರಾ, ಕಾರವಾರ, ಗೇರುಸೊಪ್ಪ, ಸಿದ್ದಾಪುರ, ಪುತ್ತೂರು, ಮಾಣಿ, ಸುಳ್ಯ, ಬೆಳ್ತಂಗಡಿ, ಹೊನ್ನಾವರ, ಅಂಕೋಲಾ, ಕ್ಯಾಸಲ್ ರಾಕ್, ಕುಮಟಾ, ಕೊಲ್ಲೂರು, ಭಾಗಮಂಡಲದಲ್ಲಿ ಭಾರಿ ಮಳೆ ಸುರಿದಿದೆ. ಬೇಲಿಕೇರಿ, ಲಿಂಗನಮಕ್ಕಿ, ಉಪ್ಪಿನಂಗಡಿ, ಸುಬ್ರಹ್ಮಣ್ಯ, ಗೋಕರ್ಣ, ಕಳಸ, ಧರ್ಮಸ್ಥಳ, ಯಲ್ಲ್ಲಾಪುರ, ಶೃಂಗೇರಿ,ತಾಳಗುಪ್ಪ, ನಾಪೋಕ್ಲು, ಮಂಚಿಕೆರೆ, ಜಯಪುರ, ವಿರಾಜಪೇಟೆಯಲ್ಲಿ ಮಳೆಯಾಗಿದೆ.