Publish Date: Wed, 09 Sep 2026 (10:42 IST)
Updated Date: Wed, 09 Sep 2026 (10:47 IST)
ಆನ್‌ಲೈನ್ ಫುಡ್ ಡೆಲಿವರಿ ಆ್ಯಪ್ ಜೊಮಾಟೊ ಮೂಲಕ ಆಹಾರ ಆರ್ಡರ್ ಮಾಡಿದ ಗ್ರಾಹಕರೊಬ್ಬರಿಗೆ ವಿಚಿತ್ರ ಹಾಗೂ ಆಘಾತಕಾರಿ ಅನುಭವ ಎದುರಾಗಿದೆ. ಆ್ಯಪ್‌ನಲ್ಲಿ ಆರ್ಡರ್ "ಡೆಲಿವರ್ ಆಗಿದೆ" ಎಂದು ತೋರಿಸಿದ್ದರೂ ಗ್ರಾಹಕರಿಗೆ ಆಹಾರ ತಲುಪಿಯೇ ಇರಲಿಲ್ಲ. ಈ ವಿಚಾರವಾಗಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಡೆಲಿವರಿ ಬಾಯ್ ಎಸಗಿರುವ ಚಾಲಾಕಿ ತನಿಖೆಗೆ ಕಾರಣವಾಗಿದೆ.
ಡೆಲಿವರಿ ಏಜೆಂಟ್ ಗ್ರಾಹಕರ ಮನೆಯ ಗೇಟ್ ಮುಂಭಾಗದಲ್ಲಿ ಫುಡ್ ಪ್ಯಾಕೇಟ್ ಇಟ್ಟು, ಅದನ್ನು ತನ್ನ ಮೊಬೈಲ್‌ನಲ್ಲಿ ಫೋಟೋ ತೆಗೆದುಕೊಂಡು ಆ್ಯಪ್‌ನಲ್ಲಿ "ಡೆಲಿವರ್ಡ್" ಎಂದು ಅಪ್‌ಲೋಡ್ ಮಾಡಿದ್ದಾನೆ. ಆ್ಯಪ್‌ನಲ್ಲಿ ನೋಟಿಫಿಕೇಶನ್ ಬಂದರೂ ಗೇಟ್ ಬಳಿ ಆಹಾರ ಇರದಿದ್ದಾಗ ಅನುಮಾನಗೊಂಡ ಗ್ರಾಹಕರು ಮನೆಯ ಸಿಟಿವಿ ಫೂಟೇಜ್ ಪರಿಶೀಲಿಸಿದ್ದಾರೆ. ಡೆಲಿವರಿ ಬಾಯ್ ಗೇಟ್ ಬಳಿ ಆಹಾರದ ಪ್ಯಾಕೇಟ್ ಇಟ್ಟು ಫೋಟೋ ತೆಗೆದುಕೊಂಡ ತಕ್ಷಣವೇ, ಆ ಪ್ಯಾಕೇಟ್ ಅನ್ನು ಮರಳಿ ತನ್ನೊಂದಿಗೆ ತೆಗೆದುಕೊಂಡು ಹೋಗಿರುವುದು ಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿದೆ.
ಗ್ರಾಹಕರು ಸಿಟಿವಿ ಫೂಟೇಜ್ ಸಾಕ್ಷ್ಯವನ್ನು ಭದ್ರವಾಗಿ ಕಾಯ್ದಿರಿಸಿಕೊಂಡು ಜೊಮಾಟೊ ಸಂಸ್ಥೆಗೆ ಅಧಿಕೃತವಾಗಿ ದೂರು ನೀಡಿದ್ದಾರೆ. ಗ್ರಾಹಕರ ನಂಬಿಕೆಯನ್ನು ದುರುಪಯೋಗಪಡಿಸಿಕೊಳ್ಳುವ ಇಂತಹ ನಡವಳಿಕೆಗಳ ವಿರುದ್ಧ ಸೂಕ್ತ ತನಿಖೆ ನಡೆಸಿ, ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ತಮ್ಮ ಗ್ರಾಹಕರಿಗೆ ನಂಬಿಕಸ್ಥ ಸೇವೆ ನೀಡುವುದು ಆನ್‌ಲೈನ್ ಡೆಲಿವರಿ ಸಂಸ್ಥೆಗಳ ಕರ್ತವ್ಯವಾಗಿದ್ದು, ಇಂತಹ ಘಟನೆಗಳು ಮರುಕಳಿಸದಂತೆ ಜೊಮಾಟೊ ಸೂಕ್ತ ತನಿಖೆ ನಡೆಸಬೇಕಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ