Select Your Language

Notifications

webdunia
webdunia
webdunia
webdunia

ಸಿಎಂಗೆ ಸ್ಟೀಲ್ ಪ್ಲೇಟ್, ರೈತರಿಗೆ ಪೇಪರ್ ಪ್ಲೇಟ್ ಎಂದು ಕಾಲೆಳೆದ ಬಿಜೆಪಿಗೆ ನೀವು ಬ್ರ್ಯಾಂಡೆಡ್ ಟೀ ಪೌಡರ್ ಕೇಳಿದ್ರಿ ಎಂದ ಕಾಂಗ್ರೆಸ್ video

CM DK Shivakumar
ಬೆಂಗಳೂರು: ಸಿಎಂ ಡಿಕೆ ಶಿವಕುಮಾರ್ ನಿನ್ನೆ ಯಶವಂತಪುರಂ ಎಪಿಎಂಸಿ ಭೇಟಿ ವೇಳೆ ಬೀದಿ ಬದಿ ತಿಂಡಿ ತಿನ್ನುವಾಗ ಅವರಿಗೆ ಮಾತ್ರ ಸ್ಟೀಲ್ ಪ್ಲೇಟ್, ಉಳಿದವರಿಗೆ ಪೇಪರ್ ಪ್ಲೇಟ್ ನೀಡಲಾಗಿತ್ತು ಎಂದು ಟಾಂಗ್ ಕೊಟ್ಟಿದ್ದ ಬಿಜೆಪಿಗೆ ಕಾಂಗ್ರೆಸ್ ತಿರುಗೇಟು ನೀಡಿದೆ.

ಯಶವಂತಪುರ ಎಪಿಎಂಸಿಗೆ ಭೇಟಿ ನೀಡಿದ ಸಿಎಂ ಡಿಕೆ ಶಿವಕುಮಾರ್ ಅಲ್ಲಿದ್ದ ರೈತರು, ವ್ಯಾಪಾರಿಗಳ ಸಮಸ್ಯೆ ಖುದ್ದಾಗಿ ಆಲಿಸಿದ್ದಾರೆ. ಬಳಿಕ ಅಲ್ಲಿದ್ದ ರೈತರೊಂದಿಗೆ ಕುಳಿತು ಬೀದಿ ಬದಿ ಇಡ್ಲಿ ಸಾಂಬಾರ್ ಸವಿದಿದ್ದರು. ಸಿಎಂ ಸರಳತೆಗೆ ಎಲ್ಲರೂ ಮೆಚ್ಚಿಕೊಂಡಿದ್ದರು.

ಆದರೆ ಸಿಎಂಗೆ ತಿಂಡಿ ತಿನ್ನಲು ಸ್ಟೀಲ್ ‍ಪ್ಲೇಟ್ ನೀಡಲಾಗಿತ್ತು. ಆದರೆ ಅವರ ಪಕ್ಕ ಕುಳಿತಿದ್ದ ಬಡವರಿಗೆ ಪೇಪರ್ ಪ್ಲೇಟ್ ನೀಡಲಾಗಿತ್ತು ಎಂದು ಬಿಜೆಪಿ ವ್ಯಂಗ್ಯ ಮಾಡಿತ್ತು. ಬಡವರ ಜೊತೆ ಕೂತು ತಿಂಡಿ ತಿಂದು ನಾಟಕ ಮಾಡಿದ್ದಾರೆ ಎಂದಿತ್ತು.

ಆದರೆ ಇದಕ್ಕೆ ತಿರುಗೇಟು ನೀಡಿದ ಕಾಂಗ್ರೆಸ್ ಬೆಂಬಲಿಗರು ಬಸವರಾಜ ಬೊಮ್ಮಾಯಿಯವರು ಸಿಎಂ ಆಗಿದ್ದಾಗ ದಲಿತರ ಮನೆಯಲ್ಲಿ ತಿಂಡಿ ತಿನ್ನಲು ಹೋದ ಕ್ಷಣದ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಬೊಮ್ಮಾಯಿ ಬರುವ ಮೊದಲು ಮನೆಗೆ ಬರುವ ಅಧಿಕಾರಿಗಳ ತಂಡ ಟೀ ಪುಡಿ ಬ್ರ್ಯಾಂಡೆಡ್ ತರಿಸಿಡುವಂತೆ ಹೇಳುವುದು ಕಂಡುಬರುತ್ತದೆ. ಇದನ್ನಿಟ್ಟುಕೊಂಡು ಕಾಂಗ್ರೆಸ್ ಕಾಲೆಳೆದಿದೆ. ಹೆಸರಿಗೆ ದಲಿತರ ಮನೆಯಲ್ಲಿ ಊಟ, ತರಿಸಿದ್ದು ಬ್ರ್ಯಾಂಡೆಡ್ ವಸ್ತುಗಳು ಎಂದು ಕಾಂಗ್ರೆಸ್ ಬೆಂಬಲಿಗರು ತಿರುಗೇಟು ನೀಡಿದ್ದಾರೆ.


pic.twitter.com/KpR3CFVF1b

 

— Sanju (@loki_rocki) September 9, 2026

Share this Story:

Follow Webdunia kannada

ಮುಂದಿನ ಸುದ್ದಿ

ಕಸ ಹಾಕಬೇಡ ಎಂದಿದ್ದಕ್ಕೆ ರೊಚ್ಚಿಗೆದ್ದಳು.. ಪೋಡ ಎಂದು ಪೌರ ಕಾರ್ಮಿಕರತ್ತ ಕಲ್ಲೆಸೆದ ಯುವತಿ Video