Daily Horoscope

Select Your Language

Notifications

webdunia
webdunia
webdunia
webdunia

Video: ಖರ್ಚಿಗೆ ಕೊಟ್ರೆ ಜಾಸ್ತಿ ದುಡ್ಡು ಬರೀತಿನಿ: ಓಪನ್ ಆಗಿ ಲಂಚ ಕೇಳಿದ ಫಾರೆಸ್ಟ್ ಆಫೀಸರ್

Chikkamagalur forest officer
Photo Credit: X
ಚಿಕ್ಕಮಗಳೂರು: ನೀವು ಖರ್ಚಿಗೆ ಸ್ವಲ್ಪ ಕೊಟ್ಟರೆ ಜಾಸ್ತಿ ದುಡ್ಡು ಬರೀತೀನಿ, ಇಲ್ಲಾಂದ್ರೆ ಎಷ್ಟಿದೆಯೋ ಅಷ್ಟೇ ಬರೀತೀನಿ ಎಂದು ಫಾರೆಸ್ಟ್ ಆಫೀಸರ್ ಓಪನ್ ಆಗಿ ಲಂಚ ಕೇಳಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ನಮ್ಮ ದೇಶದಲ್ಲಿ ಸರ್ಕಾರೀ ಅಧಿಕಾರಿಗಳು ಲಂಚ ಕೇಳುವುದು ಮಾಮೂಲಾಗಿಬಿಟ್ಟಿದೆ. ಎಲ್ಲಾ ಇಲಾಖೆಯಲ್ಲೂ ಜನ ಸಾಮಾನ್ಯರು ತಮ್ಮ ಕೆಲಸವಾಗಬೇಕೆಂದರೆ ಲಂಚ ಕೊಡುವ ಪರಿಸ್ಥಿತಿ ಬಂದಿದೆ. ಇದೀಗ ಅಂತಹದ್ದೇ ಲಂಚಕೋರ ಅಧಿಕಾರಿಯ ವಿಡಿಯೋ ವೈರಲ್ ಆಗಿದೆ.

ಚಿಕ್ಕಮಗಳೂರಿನ ಫಾರೆಸ್ಟ್ ಅಧಿಕಾರಿಯೊಬ್ಬರು ಓಪನ್ ಆಗಿಯೇ ರೈತರಿಂದ ಲಂಚ ಕೇಳಿದ್ದಾರೆ. ಕಣತಿ ಗ್ರಾಮದ ರೈತರೊಬ್ಬರು ಕಾಡಾನೆ ದಾಳಿಯಿಂದ 65 ಅಡಿಕೆ ಮರಗಳು ನಾಶವಾಗಿದ್ದವು. ಈ ಬಗ್ಗೆ ಸರ್ಕಾರದಿಂದ ಪರಿಹಾರ ಪಡೆಯಲು ಅರಣ್ಯ ಇಲಾಖೆ ಅಧಿಕಾರಿ ವೀರಭದ್ರ ನಾಯಕ್ ಲಂಚ ಕೇಳಿದ್ದಾರೆ.

‘ಖರ್ಚಿಗೆ ಏನಾದರೂ ಕೊಡ್ತೀನಿ ಅಂದರೆ ಜಾಸ್ತಿ ದುಡ್ಡು ಬರೆಯುತ್ತೇನೆ, ಇಲ್ಲಾಂದ್ರೆ 65 ಅಡಿಕೆ ಗಿಡ ಎಂದೇ ಬರೆಯುತ್ತೇನೆ ಎಂದು ಲಂಚ ಕೇಳಿದ್ದಾರೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಈ ಅಧಿಕಾರಿ ವಿರುದ್ಧ ಜನರು ಕ್ರಮಕ್ಕೆ ಆಗ್ರಹಿಸಿದ್ದಾರೆ.


pic.twitter.com/csXssO6Td2

 

— ರವಿ ಕೀರ್ತಿ ಗೌಡ (@ravikeerthi22) April 2, 2026

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ನವರು ಸೋಲಿನ ಭಯದಿಂದ ಗ್ಯಾರಂಟಿ ರದ್ದಾಗುವ ಭಯ ಹುಟ್ಟಿಸುತ್ತಾರೆ: ಗೋವಿಂದ ಕಾರಜೋಳ