Select Your Language

Notifications

webdunia
webdunia
webdunia
webdunia

ನೋವಿನಲ್ಲಿ ಕಣ್ಣೀರು ಹಾಕುತ್ತಿದ್ದರೂ ಭಾರದ ಹೊರೆ ಹೊತ್ತು ನಡೆದ ವ್ಯಕ್ತಿ: ಅಪ್ಪನೆಂದರೆ ಹಾಗೆ ಎಂದ ನೆಟ್ಟಿಗರು Video

Viral video news
Photo Credit: X
ಹೆಗಲ ಮೇಲಿನ ಭಾರ, ಮನಸ್ಸಿನಲ್ಲಿರುವ ನೋವಿನಿಂದ ವ್ಯಕ್ತಿಯೊಬ್ಬ ಕಣ್ಣೀರು ಹಾಕುತ್ತಾ ಭಾರದ ವಸ್ತು ಹೊರುವ ಕೆಲಸ ಮಾಡುತ್ತಾನೆ. ಈತನ ವಿಡಿಯೋ ಈಗ ನೆಟ್ಟಿಗರ ಮನಗೆದ್ದಿದೆ.

 
ಸೋಷಿಯಲ್ ಮೀಡಿಯಾದಲ್ಲಿ ಕೆಲವೊಂದು ದೃಶ್ಯಗಳು ನಿಜಕ್ಕೂ ನಮ್ಮ ಕಣ್ಣು ತೇವವಾಗಿಸುತ್ತದೆ. ಅಂತಹದ್ದೇ ಘಟನೆಯಿದು. ನಮ್ಮ ಕುಟುಂಬ ಚೆನ್ನಾಗಿರಬೇಕು, ಸಲಹಬೇಕು ಎಂದು ಹಲವರು ಎಷ್ಟೇ ಕಷ್ಟವಾದರೂ ಕೆಲಸ ಮಾಡುತ್ತಾರೆ.

 
ಅದೇ ರೀತಿ ಈ ವ್ಯಕ್ತಿಯೂ ತನ್ನ ಕುಟುಂಬದ ನಿರ್ವಹಣೆಗಾಗಿ ಮನಸ್ಸಿನಲ್ಲಿ ನೋವಿದ್ದರೂ ಭಾರವಾದ ಫ್ರಿಡ್ಜ್ ಹೊರುವ ಕೆಲಸ ಮಾಡುತ್ತಾನೆ. ಆತನ ಹೆಗಲ ಮೇಲೆ ದೊಡ್ಡ ಮೂಟೆಯಿದ್ದರೆ ಕಣ್ಣಿನಲ್ಲಿ ಬೇಸರ, ನೋವಿನಿಂದ ಕಣ್ಣೀರು ಬರುತ್ತಿರುತ್ತದೆ.

 
ಇದನ್ನು ನೋಡಿದರೆ ನಮ್ಮ ಕಣ್ಣಂಚೂ ಒದ್ದೆಯಾಗುತ್ತದೆ. ಏನೇ ನೋವಿದ್ದರೂ ಈ ವ್ಯಕ್ತಿ ಭಾರ ಹೊರುತ್ತಿದ್ದಾನೆ. ಯಾಕೆಂದರೆ ಆತನಿಗೆ ತನ್ನ ಜವಾಬ್ಧಾರಿಯ ಅರಿವಿದೆ. ತಾನು ನೋವುಂಡರೇ ಕುಟುಂಬ ಹೊಟ್ಟೆ ತುಂಬಾ ಊಟ ಮಾಡಬಹುದು ಎಂದು ಆತನಿಗೆ ಅರಿವಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
pic.twitter.com/ggO1TSD0nu

 

— ???????? Indrani ???????? (@Anti_Congressi) April 1, 2026

Share this Story:

Follow Webdunia kannada

ಮುಂದಿನ ಸುದ್ದಿ

ಇರಾನ್ ಜೊತೆ ತಾನೇ ಯುದ್ಧ ಶುರು ಮಾಡಿ ಒಬಾಮ ಕಾರಣ ಎಂದ ಡೊನಾಲ್ಡ್ ಟ್ರಂಪ್