Publish Date: Fri, 04 Sep 2026 (09:34 IST)
Updated Date: Fri, 04 Sep 2026 (09:44 IST)
ಇಂದಿನ ವಾಹನ ದಟ್ಟಣೆಯ ಯುಗದಲ್ಲಿ ರಸ್ತೆಯಿಳಿದು ವಾಹನ ಚಲಾಯಿಸುವುದು ಎಂದರೆ ಕೇವಲ ಎಂಜಿನ್ ನಿಯಂತ್ರಿಸುವುದಷ್ಟೇ ಅಲ್ಲ, ನಮ್ಮ ತಾಳ್ಮೆ ಮತ್ತು ಭಾವನೆಗಳನ್ನು ನಿಯಂತ್ರಿಸುವುದೂ ಕೂಡ ಹೌದು. ರಸ್ತೆಯಲ್ಲಿ ಯಾವುದೇ ಕ್ಷಣದಲ್ಲಾದರೂ ಸಣ್ಣ ತಪ್ಪು ಸಂಭವಿಸಬಹುದು; ಆದರೆ, ಆ ತಪ್ಪನ್ನು ಹೇಗೆ ಎದುರಿಸುತ್ತೇವೆ ಎಂಬುದು ನಮ್ಮ ವ್ಯಕ್ತಿತ್ವವನ್ನು ಬಿಂಬಿಸುತ್ತದೆ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋವೊಂದು ನಮಗೆ ಸಂಯಮ ಮತ್ತು ಸಹನೆಯ ದೊಡ್ಡ ಪಾಠವನ್ನೇ ಕಲಿಸಿಕೊಡುತ್ತದೆ.
ಈ ಘಟನೆಯಲ್ಲಿ ಸಂಪೂರ್ಣ ತಪ್ಪು ಬೈಕ್ ಸವಾರನದ್ದೇ ಆಗಿತ್ತು. ಸಣ್ಣ ಜಾಗದಲ್ಲಿ ಬೈಕ್ ತೂರಿಸುವ ಬದಲು ಆತ ಸರಳವಾಗಿ ಬದಿಗೆ ಸರೆದಿದ್ದರೆ ಯಾವುದೇ ಸಮಸ್ಯೆ ಎದುರಾಗುತ್ತಿರಲಿಲ್ಲ. ಬೈಕ್ ಸವಾರನ ಬೇಜವಾಬ್ದಾರಿ ಚಾಲನೆಯಿಂದ ಗಲಾಟೆ ಸೃಷ್ಟಿಯಾಯಿತಾದರೂ, ಅಲ್ಲಿ ನಡೆದ ಮುಂದಿನ ಘಟನೆ ಪ್ರತಿಯೊಬ್ಬರ ಮನ ಮುಟ್ಟುವಂತಿತ್ತು. ಬೈಕ್ ಸವಾರ ಉದ್ರೇಕಗೊಂಡು ಗಲಾಟೆಗೆ ಬಂದರೂ, ಲಾರಿ ಚಾಲಕ ತನ್ನ ಮಗಳ ಎದುರು ಕೋಪಗೊಳ್ಳದೆ, ಆಕೆಯ ಮುಂದೆ ಕೈಯೆತ್ತದೆ ತೀರಾ ಶಾಂತವಾಗಿ ಪರಿಸ್ಥಿತಿಯನ್ನು ನಿಭಾಯಿಸಿದ.
ಆ ಕ್ಷಣದಲ್ಲಿ ಲಾರಿ ಚಾಲಕನಿಗೆ ತಿರುಗಿ ಹೊಡೆಯುವ ಅಥವಾ ಜಗಳವಾಡುವ ಎಲ್ಲಾ ಅವಕಾಶಗಳಿದ್ದವು. ಆದರೆ ತನ್ನ ಪುಟ್ಟ ಮಗಳ ಮನಸ್ಸಿನ ಮೇಲೆ ಈ ಹಿಂಸೆ ಮತ್ತು ಕೋಪ ದುಷ್ಪರಿಣಾಮ ಬೀರಬಾರದು ಎಂಬ ಏಕೈಕ ಕಾರಣಕ್ಕೆ ಆತ ತನ್ನ ಆಕ್ರೋಶವನ್ನು ಹತೋಟಿಯಲ್ಲಿಟ್ಟುಕೊಂಡ. ಮಗಳ ಕಣ್ಣಿನಲ್ಲಿ ತಂದೆಯೊಬ್ಬ ಹಿಂಸಾಚಾರದ ಸಂಕೇತವಾಗಬಾರದು, ಬದಲಿಗೆ ಶಾಂತಿ ಮತ್ತು ತಾಳ್ಮೆಯ ಮಾದರಿಯಾಗಬೇಕು ಎಂದು ಆತ ನಿರೂಪಿಸಿದ.
ರಸ್ತೆಯಲ್ಲಿ ತಪ್ಪು ಯಾರದ್ದೇ ಆಗಿರಲಿ, ಮಾತಿನಿಂದ ಮತ್ತು ಪ್ರಬುದ್ಧತೆಯಿಂದ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು. ಬಿಸಿರಕ್ತದ ಕೋಪದಲ್ಲಿ ಮಾಡುವ ಗಲಾಟೆ ಜೀವಕ್ಕೇ ಕಂಟಕವಾಗಬಹುದು. ಈ ವಿಡಿಯೋದಲ್ಲಿ ಬೈಕ್ ಸವಾರ ತಪ್ಪು ಮಾಡಿರಬಹುದು, ಆದರೆ ತನ್ನ ಮಗಳ ಸಮ್ಮುಖದಲ್ಲಿ ಅಪ್ರತಿಮ ತಾಳ್ಮೆ ಮತ್ತು ಸಂಯಮ ಪ್ರದರ್ಶಿಸಿದ ಆ ಲಾರಿ ಚಾಲಕನಿಗೆ ನಿಜಕ್ಕೂ ಸಲಾಂ ಹೇಳಲೇಬೇಕು!
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ