Publish Date: Thu, 03 Sep 2026 (15:03 IST)
Updated Date: Thu, 03 Sep 2026 (15:08 IST)
ಮುಂಬೈ: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್. ಧೋನಿ ಹಾಗೂ ವಿಕೆಟ್‌ಕೀಪರ್ ಬ್ಯಾಟರ್ ರಿಷಭ್ ಪಂತ್ ಸ್ನೇಹಿತರೊಂದಿಗೆ ಖಾಸಗಿ ಪಾರ್ಟಿಯೊಂದರಲ್ಲಿ ಭಾಗಿಯಾಗಿದ್ದ ವೇಳೆ ಚಿತ್ರೀಕರಿಸಲಾದ ವೀಡಿಯೋ ತುಣುಕೊಂದು ಸೋಷಿಯಲ್ ಮೀಡಿಯಾದಲ್ಲಿ ಕಾಡ್ಗಿಚ್ಚಿನಂತೆ ಹರಡುತ್ತಿದ್ದು, ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ವೈರಲ್ ವೀಡಿಯೋದಲ್ಲಿ ಏನಿದೆ?
ಇತ್ತೀಚೆಗೆ ನಡೆದ ಪಾರ್ಟಿಯೊಂದರಲ್ಲಿ ರಿಷಭ್ ಪಂತ್ ಸೋಫಾದಲ್ಲಿ ಸ್ನೇಹಿತರೊಂದಿಗೆ ಕುಳಿತು ಹರಟೆ ಹೊಡೆಯುತ್ತಿದ್ದರೆ, ಹಿನ್ನೆಲೆಯಲ್ಲಿದ್ದ ಧೋನಿ ಫೋಟೋ ತೆಗೆಸಿಕೊಂಡು ಹಿಂತಿರುಗುತ್ತಾರೆ. ಈ ವೇಳೆ ಪಂತ್, 'ಮಾಹಿ ಭಾಯ್' ಎಂದು ಕೂಗಿದಾಗ, ಅವರ ಬಳಿ ಬರುವ ಧೋನಿ "ರುಕೋ, ಜರಾ ಹುಕ್ಕಾ ಪೀಕೆ ಆತಾ ಹೂಂ" (ತಡೆ, ಸ್ವಲ್ಪ ಹುಕ್ಕಾ ಸೇದಿ ಬರ್ತೀನಿ) ಎಂದು ನಗುತ್ತಾ ಹೇಳಿ ತೆರಳುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಟೇಬಲ್ ಮೇಲೆ ಬಿಲ್ ಹಾಗೂ ಪಾನೀಯಗಳ ಕ್ಯಾನುಗಳಿದ್ದ ಈ ಖಾಸಗಿ ಗೆಟ್-ಟುಗೆದರ್ ವೀಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಭಿನ್ನ ಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ.
ಹಳೆಯ ಚರ್ಚೆಗೆ ಮತ್ತೆ ಜೀವ:
ಧೋನಿ ಅವರಿಗೆ ಹುಕ್ಕಾ (ಶೀಷಾ) ಸೇದುವ ಅಭ್ಯಾಸವಿದೆ ಎಂಬ ವಿಚಾರ ಈ ಹಿಂದೆಯೂ ಸುದ್ದಿಯಾಗಿತ್ತು. ಆಸ್ಟ್ರೇಲಿಯಾದ ಮಾಜಿ ನಾಯಕ ಜಾರ್ಜ್ ಬೈಲಿ ಮತ್ತು ಮಾಜಿ ಆಟಗಾರ ಮೈಕಲ್ ಹಸ್ಸಿ ಈ ಹಿಂದೆ ಮಾತನಾಡುವಾಗ, ಧೋನಿ ತಮ್ಮ ಹೋಟೆಲ್ ಕೊಠಡಿಯಲ್ಲಿ ಯುವ ಆಟಗಾರರೊಂದಿಗೆ ಮುಕ್ತವಾಗಿ ಕಾಲ ಕಳೆಯಲು ಹುಕ್ಕಾ ವ್ಯವಸ್ಥೆ ಮಾಡುತ್ತಿದ್ದರು ಎಂದು ಹೇಳಿಕೊಂಡಿದ್ದರು. ಈಗಿನ ವೀಡಿಯೋ ಆ ಹಳೆಯ ಚರ್ಚೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ