ವಿ.ಐ.ಪಿ ಲೇನ್ ನಲ್ಲಿ ಸೇನಾಧಿಕಾರಿಗಳ ಬಡಿದಾಟ ..!!!ಅಶಿಸ್ತು ತೋರಿದವರ ವಿರುದ್ಧ ಜನಾಕ್ರೋಶ

Webdunia
ಬುಧವಾರ, 21 ಸೆಪ್ಟಂಬರ್ 2022 (16:30 IST)
ಕಾರನ್ನು ವಿಐಪಿ ಲೇನ್​​ (ಏರ್​ಪೋರ್ಟ್​​ನಲ್ಲಿ ಗಣ್ಯರಿಗೆ ಮೀಸಲಿಡುವ ಮಾರ್ಗ)ನಲ್ಲಿ ಬಿಡುವಂತೆ ಅಲ್ಲಿನ ಭದ್ರತಾ ಸಿಬ್ಬಂದಿಗೆ ಒತ್ತಾಯಿಸಿದ್ದಾರೆ. ಅವರು ಒಪ್ಪದಿದ್ದಾಗ ಕ್ಯಾತೆ ತೆಗೆದು, ಅವರಿಗೆ ಹೊಡೆದಿದ್ದಾರೆ. ಇವರಿಬ್ಬರನ್ನೂ ವಿರುದ್ಧ ಬೆದರಿಕೆ ಹಾಕಿದ ಮತ್ತು ಹಲ್ಲೆ ಮಾಡಿದ ಆರೋಪದಡಿ ಬಂಧಿಸಲಾಗಿತ್ತು. ನಂತರ ಜಾಮೀನಿನ ಆಧಾರದ ಮೇಲೆ ಬಿಡುಗಡೆ ಮಾಡಲಾಗಿದೆ.
 
ಬೆಂಗಳೂರಿನ ಕೆಂಪೇಗೌಡ ಏರ್​ಪೋರ್ಟ್​​​ನಲ್ಲಿ ಶುಕ್ರವಾರ ಮುಂಜಾನೆಯೇ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇಬ್ಬರು ಸೇನಾಧಿಕಾರಿಗಳಾದ ಠಾಕೂರ್ ಬರುವಾರ್ ಮತ್ತು ಪಿಯೂಷ್ ರಜಪೂತ್ ಹೀಗೆ ಗಲಾಟೆ ಸೃಷ್ಟಿಸಿದ್ದರು. ಇವರಿಬ್ಬರಿಗೂ 31ವರ್ಷ ವಯಸ್ಸಾಗಿದ್ದು, ಬರುವಾರ್ ಕ್ಯಾಪ್ಟನ್​, ಮತ್ತು ಪಿಯೂಷ್​​ ರಜಪೂತ್​​ ಮೇಜರ್​ ಶ್ರೇಣಿಯ ಅಧಿಕಾರಿಗಳಾಗಿದ್ದಾರೆ. ಜಮ್ಮು-ಕಾಶ್ಮೀರದ ನೋಂದಣಿ ಸಂಖ್ಯೆ ಇರುವ ಕಾರಿನಲ್ಲಿ, ಸಿವಿಲ್​ ಉಡುಗೆಯಲ್ಲಿ (ಸಮವಸ್ತ್ರವಲ್ಲದ ಸಾದಾ ಉಡುಪು) ಬಂದಿದ್ದ ಇವರು ತಮ್ಮ ವಾಹನವನ್ನು ಒಮ್ಮೆಲೇ ವಿಐಪಿ ಲೇನ್​​ಗೆ ಬಂದಿದ್ದಾರೆ. ಆಗ ಅಲ್ಲಿದ್ದ ಖಾಸಗಿ ಸೆಕ್ಯೂರಿಟಿ ಗಾರ್ಡ್​ ಸೇನಾಧಿಕಾರಿಗಳನ್ನು ತಡೆದಿದ್ದಾನೆ. 'ಇಲ್ಲಿ ಗಣ್ಯರು ಮತ್ತು ಸಿಐಎಸ್​ಎಫ್ (ಕೇಂದ್ರ ಕೈಗಾರಿಕಾ ಭದ್ರತಾ ಪಡೆ)ನ ವಾಹನಗಳು ಮಾತ್ರ ​​ಹೋಗಬಹುದು' ಎಂದಿದ್ದಾನೆ. ಆಗ ಇಬ್ಬರೂ ಅಧಿಕಾರಿಗಳು ಕಾರಿನಿಂದ ಇಳಿದು, ಆತನ ಮೇಲೆ ವಿಪರೀತ ಕೂಗಾಡಿದ್ದಾರೆ. 'ನಮ್ಮನ್ನು ಯಾರು ಅಂದುಕೊಂಡೆ, ನಾವಿಬ್ಬರೂ ಸೇನಾಧಿಕಾರಿಗಳು. ನಮ್ಮನ್ನೂ ಈ ವಿಐಪಿ ಮಾರ್ಗದಲ್ಲಿಯೇ ಬಿಡಬೇಕು' ಎಂದು ರೇಗಿದ್ದಾರೆ.
 
ಹಾಗಿದ್ದಾಗ್ಯೂ ಸೆಕ್ಯೂರಿಟಿ ಗಾರ್ಡ್​ ತನ್ನ ಪಟ್ಟು ಬಿಡಲಿಲ್ಲ. ಕಾರಿಗೆ ಅಡ್ಡಲಾಗಿ ನಿಂತೇ ಇದ್ದ. ಆಗ ಕೋಪಗೊಂಡ ಕ್ಯಾಪ್ಟನ್ ಬರುವಾರ್ ಮೊದಲು​ ಸೆಕ್ಯೂರಿಟಿ ಗಾರ್ಡ್​ಗೆ ಥಳಿಸಿದ್ದಾರೆ. ಬಳಿಕ ರಜಪೂತ್​​ ಮತ್ತು ಬರುವಾರ್ ಇಬ್ಬರೂ ಸೇರಿ ಭದ್ರತಾ ಸಿಬ್ಬಂದಿಗೆ ಒದ್ದು, ಹೊಡೆದಿದ್ದಾರೆ. ಏರ್​ಪೋರ್ಟ್​​ನಲ್ಲಿ ಇದ್ದ ಇನ್ನಿತರ ಸೆಕ್ಯೂರಿಟಿ ಸಿಬ್ಬಂದಿ ಈ ದೃಶ್ಯ ನೋಡಿ ಅಲ್ಲಿಗೆ ಓಡಿ ಬಂದಿದ್ದಾರೆ. ಆಗ ಸೇನಾಧಿಕಾರಿಗಳು ಅವರಿಗೂ ಹೊಡೆದಿದ್ದಾರೆ. ಒಟ್ಟಾರೆ ಸ್ಥಳದಲ್ಲಿ ದೊಡ್ಡ ಉದ್ವಿಗ್ನತೆಯನ್ನೇ ಸೃಷ್ಟಿಸಿ, ಅಶಿಸ್ತು ತೋರಿಸಿದ್ದಾರೆ.
 
ಅಲ್ಲಿಗೆ ಬಂದ ಕೆಂಪೇಗೌಡ ಏರ್​ಪೋರ್ಟ್​ ಪೊಲೀಸರು ಈ ಇಬ್ಬರನ್ನೂ ಕಸ್ಟಡಿಗೆ ಪಡೆದರು. ಆದರೆ ಪೊಲೀಸರ ಕೈಯಿಂದ ತಪ್ಪಿಸಿಕೊಂಡು ಹೋಗಿ, ಪೊಲೀಸ್​ ವಾಹನವನ್ನೂ ದಾಟಿಕೊಂಡು ಹೋಗಿ ಸೆಕ್ಯೂರಿಸಿ ಸಿಬ್ಬಂದಿಗೆ ಮತ್ತೆ ಹೊಡೆದಿದ್ದಾರೆ. ನಂತರ ಪೊಲೀಸರು ಅವರನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದಾಗ 'ಈ ಇಬ್ಬರೂ ಸೇನಾಧಿಕಾರಿಗಳೂ ನಂದಿಬೆಟ್ಟದ ಬಳಿ ಪಾರ್ಟಿಯೊಂದರಲ್ಲಿ ಪಾಲ್ಗೊಂಡಿದ್ದರು. ಅವರು ಏರ್​ಪೋರ್ಟ್​​ಗೆ ಬಂದಿದ್ದು ಮುಂಜಾನೆ ಕಾಫಿ ಕುಡಿಯಲು' ಎಂಬ ವಿಚಾರ ಗೊತ್ತಾಗಿದೆ. ಅದೇನೇ ಇದ್ದರೂ ಇವರಿಬ್ಬರ ಥಳಿತದಿಂದ ಏರ್​ಪೋರ್ಟ್​ನ ಮೂವರು ಸಿಬ್ಬಂದಿ ಗಾಯಗೊಂಡಿದ್ದಾರೆ. ಅವರನ್ನು ಚಿಕಿತ್ಸೆಗೆ ಕಳಿಸಲಾಗಿದೆ. ಸೇನಾಧಿಕಾರಿಗಳು ಬೇಲ್​ ಪಡೆದು ಬಿಡುಗಡೆಯಾಗಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬನ್ನೇರುಘಟ್ಟದಲ್ಲಿ ಪ್ರವಾಸೀ ಮಹಿಳೆಯ ಮೇಲೆ ಚೀತಾ ದಾಳಿ: ಭಯಾನಕ ವಿಡಿಯೋ ಇಲ್ಲಿದೆ

Bihar election result 2025: ಲಾಲೂ ಪ್ರಸಾದ್ ಯಾದವ್ ಇಬ್ಬರು ಪುತ್ರರ ಕತೆ ಏನಾಗಿದೆ ನೋಡಿ

ಅಯ್ಯೋ ಪಾಪ ಎಂದು ಟರ್ಕಿಗೆ ಸಹಾಯ ಮಾಡಿತ್ತು ಭಾರತ: ಆದರೆ ಈಗ ಟರ್ಕಿ ಮಾಡುತ್ತಿರೋದು ಏನು

Karnataka Weather: ಈ ಜಿಲ್ಲೆಗೆ ಮಾತ್ರ ಇಂದು ಮಳೆಯ ಸೂಚನೆ

Bihar election result 2025: ಬಿಹಾರದಲ್ಲಿ ಯಾರಿಗೆ ಆರಂಭಿಕ ಮುನ್ನಡೆ

ಮುಂದಿನ ಸುದ್ದಿ
Show comments