Publish Date: Wed, 21 Sep 2022 (16:21 IST)
Updated Date: Wed, 21 Sep 2022 (17:23 IST)
ಜಾರ್ಖಂಡ್ನ ಹಜಾರಿಬಾಘ್ ಜಿಲ್ಲೆಯಲ್ಲಿ ಸೆ.15ರಂದು ನಡೆದಿದೆ. ಲೋನ್ ಬಾಕಿ ಉಳಿಸಿಕೊಂಡಿದ್ದಕ್ಕೆ ಕುಟುಂಬದ ಟ್ರ್ಯಾಕ್ಟರ್ ಅನ್ನು ಮುಟ್ಟುಗೋಲು ಹಾಕೊಂಡಿದ್ದರ ವಿರುದ್ಧ 27 ವರ್ಷದ ಗರ್ಭಿಣಿ ಪ್ರತಿಭಟಿಸುವಾಗ ದುರ್ಘಟನೆ ಸಂಭವಿಸಿದೆ.
ಟ್ರ್ಯಾಕ್ಟರ್ ಖರೀದಿಸಲು ಮಹಿಳೆಯ ತಂದೆ ಮಹೀಂದ್ರಾ ಫೈನಾನ್ಸ್ನಿಂದ 1.3 ಲಕ್ಷ ರೂಪಾಯಿ ಹಣ ಸಾಲ ಪಡೆದಿದ್ದರು. ಆದರೆ, ಅದನ್ನು ಮರುಪಾವತಿಸಲು ಸಾಧ್ಯವಾಗದಿದ್ದಾಗ, ಲೋನ್ ರಿಕವರಿ ಏಜೆಂಟ್ ಟ್ರ್ಯಾಕ್ಟರ್ ಅನ್ನು ಮುಟ್ಟುಗೋಲು ಹಾಕಿಕೊಂಡರು. ಮಹಿಳೆಯ ತಂದೆ ಸಾಕಷ್ಟು ಬೇಡಿಕೊಂಡರು ಬಿಡದೇ ಟ್ರ್ಯಾಕ್ಟರ್ ಸೀಜ್ ಮಾಡಿದರು.
ಈ ವೇಳೆ ಮಧ್ಯಪ್ರವೇಶಿಸಿದ ರೈತನ ಗರ್ಭಿಣಿ ಮಗಳು ಟ್ರ್ಯಾಕ್ಟರ್ ಮುಟ್ಟುಗೋಲಿನ ವಿರುದ್ಧ ಸ್ಥಳದಲ್ಲೇ ಪ್ರತಿಭಟನೆ ಆರಂಭಿಸಿದರು. ಆದರೆ, ಈ ಸಂದರ್ಭದಲ್ಲಿ ಆಕೆಯ ಟ್ರ್ಯಾಕ್ಟರ್ ಹರಿದು ದುರಂತವಾಗಿ ಸಾವಿಗೀಡಾದಳು. ಉದ್ದೇಶಪೂರ್ವಕವಾಗಿಯೇ ಟ್ರ್ಯಾಕ್ಟರ್ ಹರಿಸಿರುವ ಆರೋಪ ಕೇಳಿಬಂದಿದ್ದು, ಈ ಘಟನೆ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಈ ಬಗ್ಗೆ ಕಂಪನಿ ತಕ್ಷಣವೇ ಹೇಳಿಕೆ ಬಿಡುಗಡೆ ಮಾಡಿದೆ.
ಹಜಾರಿಬಾಘ್ ಘಟನೆಯಿಂದ ನಾವು ತೀವ್ರ ದುಃಖಿತರಾಗಿದ್ದೇವೆ ಮತ್ತು ವಿಚಲಿತರಾಗಿದ್ದೇವೆ. ಮಾನವ ದುರಂತವೊಂದು ಸಂಭವಿಸಿದೆ. ನಾವು ಈ ಘಟನೆಯನ್ನು ಎಲ್ಲಾ ಅಂಶಗಳಿಂದ ತನಿಖೆ ಮಾಡುತ್ತೇವೆ. ತನಿಖೆಯ ಸಮಯದಲ್ಲಿ ನಾವು ಅಧಿಕಾರಿಗಳಿಗೆ ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀಡುತ್ತೇವೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ, ಈ ದುಃಖದ ಕ್ಷಣದಲ್ಲಿ ನಾವು ಸಂತ್ರಸ್ತ ಕುಟುಂಬದೊಂದಿಗೆ ನಿಲ್ಲುತ್ತೇವೆ ಎಂದು ಮಹೀಂದ್ರಾ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನೀಶ್ ಶಾ ಪ್ರಕಟಣೆ ಹೊರಡಿಸಿದ್ದಾರೆ.