Publish Date: Sat, 13 Feb 2021 (12:23 IST)
Updated Date: Sat, 13 Feb 2021 (12:25 IST)
ಬೆಂಗಳೂರು : ಮೀಸಲಾತಿಗಾಗಿ ಸಿಎಂ ಯಡಿಯೂರಪ್ಪನವರಿಗೆ ಹಿಂಸೆ. ಸಿಎಂಗೆ ಕೊಡ್ತೀರೋ ಹಿಂಸೆ ನೋಡಿದ್ರೆ ಅಯ್ಯೋ ಅನ್ನಿಸುತ್ತೆ ಎಂದು ವೀರಶೈವ ಲಿಂಗಾಯುತ ಅಭಿವೃದ್ಧಿ ನಿಗಮ ಅಧ್ಯಕ್ಷ ಪರಶಿವಯ್ಯ ಹೇಳಿದ್ದಾರೆ.
ವೀರಶೈವ ಲಿಂಗಾಯತ ಸಭೆಯಲ್ಲಿ ಮಾತನಾಡಿದ ಅವರು, ಒಂದೆಡೆ ಕುರುಬರು, ಮತ್ತೊಂದು ಕಡೆ ವಾಲ್ಮೀಕಿ ಗಳು, ಇನ್ನೊಂದೆಡೆ ಪಂಚಮಸಾಲಿ ವೀರಶೈವರು ಹಿಂಸೆ ನೀಡುತ್ತಿದ್ದೇವೆ. ಆದರೆ ಈ ಹಿಂಸೆಯ ನಡುವೆಯೂ ಸಿಎಂ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಸಿಎಂ ಹುದ್ದೆ ವೈಭವೋಪೇತ, ಮುಳ್ಳಿನ ಹಾಸಿಗೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.