Select Your Language

Notifications

webdunia
webdunia
webdunia
webdunia

ನಿಗೂಢ ಜ್ವರಕ್ಕೆ ಗ್ರಾಮಸ್ಥರು ಹೈರಾಣು!

ನಿಗೂಢ ಜ್ವರಕ್ಕೆ ಗ್ರಾಮಸ್ಥರು ಹೈರಾಣು!
ದಾವಣಗೆರೆ , ಗುರುವಾರ, 23 ಜೂನ್ 2022 (07:33 IST)
ದಾವಣಗೆರೆ : ಕಳೆದ 20 ದಿನಗಳಿಂದ ನಿಗೂಢ ಜ್ವರದಿಂದ ಶೇ. 70ರಷ್ಟು ಮಂದಿ ಜ್ವರದಿಂದ ಬಳಲುತ್ತಿರುವ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಅಣಬೂರು ಗ್ರಾಪಂ ವ್ಯಾಪ್ತಿಯ ಕಾನನಕಟ್ಟೆ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಜಗಳೂರು ತಾಲೂಕಿನ ಅಣಬೂರು ಗ್ರಾಪಂ ವ್ಯಾಪ್ತಿಯ ಕಾನನಕಟ್ಟೆ ಗ್ರಾಮದಲ್ಲಿ ಸಾವಿರಕ್ಕೂ ಅಧಿಕ ಜನಸಂಖ್ಯೆಯಿದ್ದು, ಗ್ರಾಮದ ಪ್ರತಿಯೊಂದು ಮನೆಯಲ್ಲೂ ಜನ ನಿಗೂಢ ಜ್ವರದಿಂದ ಬಳಲುತ್ತಿದ್ದಾರೆ.

ಜ್ವರ, ಕಾಲುನೋವು, ಮೂಗಿನ ಹತ್ತಿರ ಕಪ್ಪು ಕಲೆ, ಕೈಕಾಲು ಬಾವು ಬರುವುದು, ಚರ್ಮದ ಪೊರೆ ಸುಲಿಯುವುದು, ಗುಳ್ಳೆಗಳು, ಸುಸ್ತು ಸೇರಿ ಹಲವಾರು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿವೆ. ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದರೂ ಪ್ರಯೋಜನವಾಗಿಲ್ಲ.

ಸೊಳ್ಳೆ ಕಾಟ ಹಾಗೂ ಗ್ರಾಮಕ್ಕೆ ಸರಬರಾಜು ಆಗುತ್ತಿರುವ ನೀರು ಸೇವನೆಯಿಂದ ಈ ರೀತಿ ಆಗಿರುವ ಸಾಧ್ಯತೆಯಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಕಾನನಕಟ್ಟೆ ಗ್ರಾಮಕ್ಕೆ ವೈದ್ಯರು ತೆರಳಿ ಜ್ವರದಿಂದ ಬಳಲುತ್ತಿರುವವರ ಪರೀಕ್ಷೆ ನಡೆಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಸಾಲು ಮರದ ತಿಮ್ಮಕ್ಕಗೆ ಬಿಡಿಎ ವತಿಯಿಂದ ನಿವೇಶನ ಹಂಚಿಕೆ